ETV Bharat / state

ರೈತರಿಗೆ ವಂಚಿಸಿ ಬೇನಾಮಿ ಹೆಸರಲ್ಲಿ ನೂರಾರು ಎಕರೆ ಜಮೀನು ಸಂಪಾದನೆ; ಉದ್ಯಮಿ ವಿರುದ್ಧ ಗಂಭೀರ ಆರೋಪ - ಬೇನಾಮಿ ಆಸ್ತಿ

ಗಂಗಾವತಿಯಲ್ಲಿ ಉದ್ಯಮಿಯೊಬ್ಬರು ರೈತರಿಗೆ ವಂಚಿಸಿ ನೂರಾರು ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಪಿ.ನಾಗೇಶ್ವರ ರಾವ್ ಗಂಭೀರ ಆರೋಪ ಮಾಡಿದ್ದಾರೆ.

ರೈತ
ರೈತ
author img

By

Published : Mar 11, 2020, 11:54 PM IST

ಗಂಗಾವತಿ: ನಗರದ ಉದ್ಯಮಿ ಮಜ್ಜಿಗೆ ಬಸವರಾಜ ಎಂಬವರು ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿನ ರೈತರಿಗೆ ವಂಚಿಸಿ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ರೈತ ಪಿ. ನಾಗೇಶ್ವರ ರಾವ್ ನೇರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಾಪುರ ಗ್ರಾಮದ ರೈತ ಪಿ.ನಾಗೇಶ್ವರರಾವ್, ಗಂಗಾವತಿಯ ಮಜ್ಜಿಗೆ ಬಸವರಾಜ ಎಂಬವರು ಈಳಿಗೆನೂರು ಗ್ರಾಮದಲ್ಲಿ ನೂರಾರು ಎಕರೆ ಅಕ್ರಮ ಜಮೀನು ಮಾಡಿ ಬೇನಾಮಿ ಹೆಸರಲ್ಲಿಟ್ಟಿದ್ದಾರೆ. ರೈತರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಮೀಟರ್ ಬಡ್ಡಿಗೆ ಸಾಲ ನೀಡಿ ರೈತರನ್ನು ವಂಚಿಸಲಾಗಿದೆ. ಸಾಲಕ್ಕೆ ಭದ್ರತೆಯ ರೂಪದಲ್ಲಿ ಕರಾರು ಪತ್ರದ ಬದಲಿಗೆ ರೈತರಿಂದ ಅಕ್ರಮವಾಗಿ ಭೂಮಿ ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ಧಿಗೋಷ್ಠಿಯಲ್ಲಿ ರೈತ ಪಿ.ನಾಗೇಶ್ವರರಾವ್ ಮಾತನಾಡಿದರು.

ಕೇವಲ ಹತ್ತು ವರ್ಷದ ಹಿಂದೆ ಗಂಗಾವತಿಯ ಸುರೇಶ, ಮಲ್ಲಿಕಾರ್ಜುನ ಹಾಗೂ ಹೊಸಕೇರಿಯ ವೀರಭದ್ರಪ್ಪ ಎಂಬುವವರ ಹೆಸರಲ್ಲಿ ನಾಲ್ಕಾರು ಎಕರೆ ಜಮೀನು ಕೂಡಾ ಇರಲಿಲ್ಲ. ಆದರೆ ಇಂದು ಇವರ ಹೆಸರುಗಳಲ್ಲಿ ನೂರಾರು ಎಕರೆ ಜಮೀನಿದೆ. ರೈತರಿಗೆ ವಂಚಿಸಿರುವ ಮಜ್ಜಿಗೆ ಬಸವರಾಜ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ಬೇನಾಮಿ ಹೆಸರಲ್ಲಿಟ್ಟಿದ್ದಾರೆ ಎಂದು ನಾಗೇಶ್ವರ ರಾವ್ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.