ಕೊಪ್ಪಳ: ಕೊಪ್ಪಳ ಮಾರ್ಗದ ಮೂಲಕ ನೂತನವಾಗಿ ಪ್ರಾರಂಭವಾದ ಹುಬ್ಬಳ್ಳಿ-ಚೆನ್ನೈ ಪ್ಯಾಸೆಂಜರ್ ಎಕ್ಸ್ಪ್ರೆಸ್ ರೈಲಿಗೆ ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ರೈಲು ನಿಲ್ದಾಣದಲ್ಲಿ ಪೂಜೆ ಸಲ್ಲಿಸಿದರು.
ಈ ನೂತನ ರೈಲಿನಲ್ಲಿ ಹುಬ್ಬಳ್ಳಿಯಿಂದ ಆಗಮಿಸಿದ ಸಂಸದ ಸಂಗಣ್ಣ ಕರಡಿ, ಕೊಪ್ಪಳ ರೈಲು ನಿಲ್ದಾಣದಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಮುಖಂಡರೊಡಗೂಡಿ ರೈಲಿಗೆ ಪೂಜೆ ಸಲ್ಲಿಸಿದರು.
ವಾರದಲ್ಲಿ ಎರಡು ದಿನ ಸಂಚರಿಸಲಿರುವ ಈ ರೈಲು ಕೊಪ್ಪಳದಲ್ಲಿ ನಿಲುಗಡೆಯಾಗಲಿದೆ. ಹುಬ್ಬಳ್ಳಿ-ಚೆನ್ನೈ ಹೊಸ ರೈಲು ಹುಬ್ಬಳ್ಳಿಯಿಂದ ಹೊರಟು ಗದಗ, ಕೊಪ್ಪಳ ಮಾರ್ಗವಾಗಿ ಹೊಸಪೇಟೆ, ಬಳ್ಳಾರಿ, ಗುಂತಕಲ್, ರೇಣುಗುಂಟಾ ಮೂಲಕ ಚೆನ್ನೈಗೆ ತಲುಪಲಿದೆ. ಈ ರೈಲು ಆರಂಭದಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ. ಇನ್ನು ವಿಜಯಪುರ ದಿಂದ ಕೊಪ್ಪಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.