ಗಂಗಾವತಿ: ಆರ್ಆರ್ಆರ್ ಚಿತ್ರ ನಗರದ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಟಿಕೆಟ್‌ಗೆ ಹೆಚ್ಚುವರಿ ಹಣ ಸುಲಿಗೆ ಮಾಡಲಾಗಿದೆ. ಚಿತ್ರ ಮಂದಿರದ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ದೂರು ನೀಡಿದ್ದಾರೆ.
ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಈ ಬಗ್ಗೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಚಂದ್ರಹಾಸ ಮತ್ತು ಪೂರ್ಣಿಮಾ ಚಿತ್ರ ಮಂದಿರದ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಬಹು ತಾರಾಗಣ ಇರುವ ಮತ್ತು 800 ಕೋಟಿ ರೂ. ಬಜೆಟ್ ವೆಚ್ಚದ ಚಿತ್ರವನ್ನು ನೋಡಲು ಪ್ರೇಕ್ಷಕರು ತುದಿಗಾಲ ಮೇಲೆ ನಿಂತಿದ್ದರು.
ಮಾ. 25ಕ್ಕೆ ಸಿನಿಮಾ ಬಿಡುಗಡೆಯಾಗಿದೆ. ಚಿತ್ರ ಮಂದಿರದ ಮಾಲಿಕರು ದುಬಾರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಿದ್ದಾರೆ. ಚಂದ್ರಹಾಸದಲ್ಲಿ 500 ರೂ.ಗೆ ಮಾರಾಟ ಮಾಡಿದರೆ, ಪೂರ್ಣಿಮಾ ಚಿತ್ರ ಮಂದಿರದಲ್ಲಿ 250 ರೂ.ಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ವಾಸ್ತವದಲ್ಲಿ ಕೇವಲ 150 ರೂ. ದರವಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಘಟಕರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಇದನ್ನೂ ಓದಿ: 100 ಥಿಯೇಟರ್‌ಗಳಲ್ಲಿ ಕನ್ನಡ ಅವತರಣಿಕೆಯ RRR ಚಿತ್ರ ರಿಲೀಸ್ : ಒಂದು ಟಿಕೆಟ್‌ಗೆ ₹700