ETV Bharat / state

ನವವೃಂದಾವನ ಗಡ್ಡೆ: ಉತ್ತರಾಧಿ ಮಠಕ್ಕೆ ಆರಾಧನೆಗೆ ಹೈಕೋರ್ಟ್​ ಅಸ್ತು

ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಮೂರು ದಿನಗಳ ಕಾಲ ರಘುವರ್ಯತೀರ್ಥರ ಆರಾಧನೆಗೆ ಉತ್ತರಾಧಿಮಠಕ್ಕೆ ಅವಕಾಶ ನೀಡಿ ಹೈಕೋರ್ಟ್​ ಆದೇಶ ನೀಡಿದೆ.

the-high-court-has-given-permission-to-the-uttaradhi-math-to-worship-at-navavrindavangadde
ನವವೃಂದಾವನ ಗಡ್ಡೆ : ಉತ್ತರಾಧಿ ಮಠಕ್ಕೆ ಆರಾಧನೆಗೆ ಹೈಕೋರ್ಟ್​ ಅಸ್ತು
author img

By

Published : Jun 5, 2023, 9:22 PM IST

ಗಂಗಾವತಿ (ಕೊಪ್ಪಳ) : ಮಾಧ್ವ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ತಾಲ್ಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಮೂರು ದಿನಗಳ ಕಾಲ ರಘುವರ್ಯತೀರ್ಥರ ಆರಾಧನೆಗೆ ಉತ್ತರಾಧಿಮಠಕ್ಕೆ ಅವಕಾಶ ನೀಡಿ ಹೈಕೋರ್ಟ್​ ಆದೇಶ ನೀಡಿದೆ. ಜೂ.5ರಿಂದ 7ರವರೆಗೆ ನಡೆಯುವ ರಘುವರ್ಯ ತೀರ್ಥರ ಆರಾಧನೆಗೆ ಉತ್ತರಾಧಿಮಠಕ್ಕೆ ಅವಕಾಶ ಕಲ್ಪಿಸಿ ಧಾರವಾಡದ ಹೈಕೋರ್ಟ್​ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಬಳಿಕ ನವವೃಂದಾವನಕ್ಕೆ ಪ್ರವೇಶಿಸಿದ ಉತ್ತರಾಧಿಮಠದ ಪೀಠಾಧಿಪತಿ ಸತ್ಯಾತ್ಮತೀರ್ಥರು, ರಘುವರ್ಯ ತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುವ ಮೂಲಕ ಪೂರ್ವಾರಾಧನೆ ನೆರವೇರಿಸಿದರು. ಮಂಗಳವಾರ ಮತ್ತು ಬುಧವಾರ ಮಧ್ಯಾರಾಧನೆ ಮತ್ತು ಉತ್ತರಾಧನೆ ನೆರವೇರಲಿದೆ.

ಜೂನ್ 5ರಿಂದ ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ರಘುವರ್ಯ ತೀರ್ಥರ ಆರಾಧನೆ ಅಂಗವಾಗಿ ಉತ್ತರಾಧಿಮಠದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಮಠದ ಅನುಯಾಯಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಇದೇ ಸಮಯದಲ್ಲಿ ಮೂರು ದಿನಗಳ ಕಾಲ ಮಂತ್ರಾಲಯ ಮಠದಿಂದ ಶ್ರೀ ಮನ್ನಯಾಸುಧಾ ಸಮರ್ಪಣಾ ದಿನೋತ್ಸವದ ಆಚರಣೆಗೆ ಅವಕಾಶ ನೀಡುವಂತೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಅನುಯಾಯಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

ಉಭಯ ಮಠದ ಅನುಯಾಯಿಗಳ ಸಭೆ ಕರೆದು ಸಮನ್ವಯ ಸಭೆ ನಡೆಸಿ ವಿವಾದ ಬಗೆಹರಿಸಲು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಯತ್ನಿಸಿದರು. ಆದರೆ ಸಂಧಾನ ಫಲಪ್ರದವಾಗದ ಹಿನ್ನೆಲೆ ನ್ಯಾಯಾಲಯದಿಂದ ಆದೇಶ ತರುವಂತೆ ಸೂಚನೆ ನೀಡಿದ್ದರು. ಇದೀಗ ಉತ್ತರಾಧಿಮಠಕ್ಕೆ ಅವಕಾಶ ನೀಡಿ ಹೈಕೋರ್ಟ್​ ಆದೇಶ ನೀಡಿದೆ.

ನವ ವೃಂದಾವನ ಗಡ್ಡೆ ವಿವಾದ : ಈ ಹಿಂದೆಯೂ ನವ ವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಅವಕಾಶ ಕೊಡಬೇಕೆಂದು ಉಭಯ ಮಠಗಳ ಅನುಯಾಯಿಗಳು ಒತ್ತಾಯಿಸಿದ್ದರು. ನವ ವೃಂದಾವನ ಗಡ್ಡೆಯಲ್ಲಿರುವ ಬೃಂದಾವನವನ್ನು ಉತ್ತರಾಧಿ ಮಠದವರು ರಘುವರ್ಯ ತೀರ್ಥರೆಂದು, ರಾಯರ ಮಠದವರು ಜಯತೀರ್ಥರೆಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಎರಡು ಮಠಗಳ ನಡುವೆ ವಾದ ವಿವಾದ ಆರಂಭವಾಗಿತ್ತು. ಈ ವಿವಾದವನ್ನು ಶಮನಗೊಳಿಸಲು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿತ್ತು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ಇದನ್ನೂ ಓದಿ : ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಪರಿಸರ ದಿನಾಚರಣೆ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.