ETV Bharat / state

ಪತ್ನಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅಂಜನಾದ್ರಿಗೆ ಭೇಟಿ

ಕರ್ನಾಟಕ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಅಂಜನಾದ್ರಿ ಬೆಟ್ಟಕ್ಕೆ ಪತ್ನಿ ಸಮೇತ ಆಗಮಿಸಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

High Court Chief Justice Ritu Raj Awasthi visit anjanadri temple
ಪತ್ನಿಯೊಂದಿಗೆ ಚೀಫ್ ಜೆಸ್ಟಿಸ್ ರೀತುರಾಜ್ ಅಂಜನಾದ್ರಿಗೆ ಭೇಟಿ
author img

By

Published : Jun 25, 2022, 8:52 PM IST

ಗಂಗಾವತಿ(ಕೊಪ್ಪಳ): ಬೆಂಗಳೂರು ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಶನಿವಾರ ಸಂಜೆ ತಾಲೂಕಿನ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಪತ್ನಿ ಸಮೇತ ಆಗಮಿಸಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯನ್ಯಾಯಮೂರ್ತಿ ಅಂಜನಾದ್ರಿಗೆ ಆಗಮಿಸುತ್ತಿದ್ದ ಹಿನ್ನೆಲೆ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು.

ಪತ್ನಿಯೊಂದಿಗೆ ಚೀಫ್ ಜೆಸ್ಟಿಸ್ ರೀತುರಾಜ್ ಅಂಜನಾದ್ರಿಗೆ ಭೇಟಿ

ಮೊದಲಿಗೆ ಬೆಟ್ಟದ ಕೆಳಗೆ ಇರುವ ಹನುಮಪ್ಪನ ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದ ನ್ಯಾಯಮೂರ್ತಿಗಳು 580 ಮೆಟ್ಟಿಲುಗಳುಳ್ಳ ಬೆಟ್ಟ ಏರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಅರಣಂಶುಗಿರಿ, ಅಪರ ಜಿಲ್ಲಾಧಿಕಾರಿ ಮಾರುತಿ, ತಹಶೀಲ್ದಾರ್ ಯು. ನಾಗರಾಜ್ ಸೇರಿದಂತೆ ಇತರರಿದ್ದರು. ಪೂಜೆ ಬಳಿಕ ಕಮಲಾಪುರದ ಬಳಿ ಇರುವ ಖಾಸಗಿ ಅಥಿತಿ ಗೃಹಕ್ಕೆ ತೆರಳಿದರು.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಸೇರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.