ಕುಷ್ಟಗಿ (ಕೊಪ್ಪಳ): ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣದ 7ನೇ ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ ನೀರು ಜನವಸತಿಯತ್ತ ನುಗ್ಗಿ ಅಸ್ತವ್ಯಸ್ತಕ್ಕೆ ಕಾರಣವಾಗುತ್ತಿದೆ.
ಪಟ್ಟಣದ 7ನೇ ವಾರ್ಡ್ನ ಹಳೆ ನೆರೆಬೆಂಚಿ ರಸ್ತೆಯಲ್ಲಿರುವ ಚರಂಡಿಯನ್ನು ಪುರಸಭೆ ಅವೈಜ್ಞಾನಿಕವಾಗಿ ನಿರ್ಮಿಸಿದೆ. ಮಳೆಗಾಲದ ಸಂದರ್ಭದಲ್ಲಿ ಚರಂಡಿ ಭರ್ತಿಯಾಗಿ ಹರಿದು ರಾಯಬಾಗಿ ಲೇಔಟ್ನತ್ತ ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬುಧವಾರ ಸಂಜೆ ಸುರಿದ ಮಳೆಯಿಂದ ಚರಂಡಿ ನೀರಿನೊಂದಿಗೆ ತ್ಯಾಜ್ಯವೂ ಹರಿಯುತ್ತಿದೆ. ಈ ಅವಸ್ಥೆಯ ಬಗ್ಗೆ ಪುರಸಭೆ ಅಧ್ಯಕ್ಷ, ಶಾಸಕರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎನ್ನುವುದು ಸ್ಥಳೀಯರ ಅಳಲು.