ಗಂಗಾವತಿ: ನಗರ ಸೇರಿದಂತೆ ಸುತ್ತಮುತ್ತಲು ಧಾರಾಕಾರವಾಗಿ ಮಳೆ ಸುರಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲೇ ಇಷ್ಟೊಂದು ಮಳೆಯನ್ನು ಜನ ಕಂಡಿರಲಿಲ್ಲ.
ಕಳೆದ ಎರಡು ದಿನಗಳಲ್ಲಿ ಅಬ್ಬರಿಸಿದ ಮಳೆಯಿಂದಾಗಿ ನಗರದ ಚರಂಡಿಗಳು ತುಂಬಿಕೊಂಡು, ರಸ್ತೆಗಳ ಮೇಲೆ ಹರಿದು ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಇನ್ನು, ನಗರಸಭೆಯ ಆವರಣ, ಪಶುಪಾಲನಾ ಇಲಾಖೆ, ಸರ್ಕಾರಿ ಜೂನಿಯರ್ ಕಾಲೇಜು, ಕ್ರೀಡಾಂಗಣ, ಕೋಳಿ ಸಂವರ್ಧನ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಕಚೇರಿಗಳು ತಗ್ಗು ಪ್ರದೇಶದಲ್ಲಿರುವುದರಿಂದ ಜಲ ಜಲ ದಿಗ್ಬಂಧನವಾಗಿದೆ. ಜನ ಪ್ರಯಾಸಪಟ್ಟು ಕಚೇರಿಗೆ ತೆರಳುವ ಸ್ಥಿತಿ ಕಂಡುಬಂತು.