ETV Bharat / state

ಲಾಕ್​ಡೌನ್​ ಸಂಕಷ್ಟ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಹಮಾಲರು - Bajara Hamali workers

ಲಾಕ್‌ಡೌನ್ ಜಾರಿಯಿಂದ ಅಸಂಘಟಿತ ಹಮಾಲರು, ಬಂಜಾರ ಹಮಾಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ಸೂಕ್ತ ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

Hamali community needs Government support amid lockdown...
ಲಾಕ್​ಡೌನ್​ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಹಮಾಲಿ ಜನಾಂಗಕ್ಕೆ ಬೇಕಿದೆ ಸರ್ಕಾರದ ಸಹಾರ
author img

By

Published : May 9, 2020, 11:51 AM IST

ಕುಷ್ಟಗಿ(ಕೊಪ್ಪಳ): ಲಾಕ್‌ಡೌನ್ ಜಾರಿಯಿಂದ ಅಸಂಘಟಿತ ಹಮಾಲರು, ಬಂಜಾರ ಹಮಾಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸೂಕ್ತ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಗ್ರೇಡ್-2 ತಹಶೀಲ್ದಾರ ವಿಜಯಾ ಅವರಿಗೆ ಹಮಾಲರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಸಿಐಟಿಯು ಅಧ್ಯಕ್ಷೆ ಕಲಾವತಿ ಮೆಣೆದಾಳ ಮಾತನಾಡಿ, ಶ್ರಮಿಕ ವರ್ಗ ಹಮಾಲರು ಆರ್ಥಿಕವಾಗಿ ದುರ್ಬಲವಾಗಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಸದ್ಯ ಎಪಿಎಂಸಿ ಮಾರುಕಟ್ಟೆ ಆರಂಭವಾಗಿದ್ದು, ಶೇ.10ರಷ್ಟು ಕೆಲಸ ಸಿಗುತ್ತಿದೆ. ಅದು ಕುಟುಂಬ ನಿರ್ವಹಣೆಗೆ ಸಾಲುವುದಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಪರಿಹಾರ ನೀಡಬೇಕೆಂದು ಹಕ್ಕೋತ್ತಾಯದ ಮನವಿ ಸಲ್ಲಿಸಿದರು. ಈ ವೇಳೆ ಬಂಜಾರ ಹಮಾಲರ ಸಂಘದ ಅಧ್ಯಕ್ಷ ಹನುಮಂತ ಸಿಡ್ಲವಿ ಮತ್ತಿತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.