ಗಂಗಾವತಿ: ದೈವದ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿದ್ದನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗುಂಪು ಘರ್ಷಣೆಯಾದ ಪ್ರಕರಣ ಸಂಬಂಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ 35 ಜನರ ವಿರುದ್ಧ ದೂರು-ಪ್ರತಿ ದೂರು ದಾಖಲಾಗಿದೆ.
ಹಿಂದುಗಳ ದೇವಸ್ಥಾನದ ಊರಿನಲ್ಲಿ ಇರಬಾರದು ಎಂಬ ಸ್ಟೇಟಸ್ ಇಟ್ಟು ಗಲಭೆಗೆ ಕುಮ್ಮಕ್ಕು ನೀಡಿದ್ದಾನೆ ಎಂದು ಆರೋಪಿಸಿ ವೆಂಕಟೇಶ ಸೇಖರಪ್ಪ ಎಂಬುವವರರು ಸಾಧಿಕ್ ಶೇಖಣ್ಣ ಹಾಗೂ ಇತರ 18 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಇದಕ್ಕೆ ಪ್ರತಿ ದೂರು ಸಲ್ಲಿಸಿರುವ ಮಹೇಬೂಬ ವಲೀಸಾಬ ಎಂಬ ಯುವಕ, ಹನುಮನೂ ಇಲ್ಲ, ರಾಮನೂ ಇಲ್ಲ ಕೇವಲ ಅಂಬೇಡ್ಕರ್ ಮಾತ್ರ ಎಂಬ ವಾಟ್ಸಫ್ ಸ್ಟೇಟಸ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಶಿವಾರೆಡ್ಡಿ ಹನುಮಂತ ಹಾಗೂ ಇತರೆ 17 ಜನ ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನಿಂದ ದೂರು-ಪ್ರತಿದೂರು ದಾಖಲಾಗಿದ್ದು, 35 ಜನರ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಗಂಗಾವತಿಯಲ್ಲಿ ಗುಂಪು ಘರ್ಷಣೆ: 9 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ