ETV Bharat / state

ಮುಷ್ಕರ ಎಫೆಕ್ಟ್: ಪರ್ಯಾಯ ಮಾರ್ಗ ಕಂಡುಕೊಂಡ ಕೊಪ್ಪಳ ಸಾರಿಗೆ ಸಂಸ್ಥೆ

author img

By

Published : Apr 10, 2021, 4:20 PM IST

ಸಾರಿಗೆ ನೌಕರರ ಮುಷ್ಕರದ ನಾಲ್ಕನೇ ದಿನವಾದ ಇಂದು ಕೊಪ್ಪಳದಲ್ಲಿಯೂ ಸಹ ಬಹಳಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಬೆಂಬಲಿಸಿದ್ದಾರೆ.

Sarige protest
Sarige protest

ಕೊಪ್ಪಳ: ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಸಿಬ್ಬಂದಿ ಬಾರದ ಹಿನ್ನೆಲೆ ಕೊಪ್ಪಳದಲ್ಲಿ ಅಧಿಕಾರಿಗಳು ಸಾರಿಗೆ ಸಂಸ್ಥೆಯಲ್ಲಿ ಪರ್ಯಾಯ ಹುದ್ದೆ ಹೊಂದಿರುವ ಸಿಬ್ಬಂದಿಯನ್ನು ಬಳಸಿಕೊಂಡು ಕೆಲ ಬಸ್​​ಗಳನ್ನು ಇಂದು ರಸ್ತೆಗೆ ಇಳಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ನಾಲ್ಕನೇ ದಿನವಾದ ಇಂದು ಕೊಪ್ಪಳದಲ್ಲಿಯೂ ಸಹ ಬಹಳಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಬೆಂಬಲಿಸಿದ್ದಾರೆ.

ಈ ನಡುವೆ ಅಮಾನತಾಗಿರುವ ಸಿಬ್ಬಂದಿಗೆ ಮತ್ತೆ ಅಮಾನತು ರದ್ದುಪಡಿಸಿ ಕರ್ತವ್ಯಕ್ಕೆ ಕರೆಸಿಕೊಂಡು ಒಂದಿಷ್ಟು ಬಸ್​​ಗಳನ್ನು ರಸ್ತೆಗಿಳಿಸಿದ್ದ ಅಧಿಕಾರಿಗಳು, ಇಂದು ವಿವಿಧ ಕಾರಣಗಳಿಂದ ದೈಹಿಕ ಅನ್​​ಫಿಟ್ ಆಗಿ ಪರ್ಯಾಯ ಹುದ್ದೆ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೂಲಕ ಬಸ್ ಕಾರ್ಯಾಚರಣೆ ನಡೆಸಿದ್ದಾರೆ.

ಇದರ ಜತೆಗೆ ಬಸ್ ನಿಲ್ದಾಣದಲ್ಲಿನ ಕಂಟ್ರೋಲರ್​​ಗಳನ್ನು ನಿರ್ವಾಹಕ ಕರ್ತವ್ಯಕ್ಕೆ ಕಳಿಸಿದ್ದಾರೆ. ಇಂದು ಕೊಪ್ಪಳದಿಂದ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ 16 ಬಸ್​​ಗಳು ಸಂಚಾರ ನಡೆಸಿವೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.