ಗಂಗಾವತಿ (ಕೊಪ್ಪಳ): ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಪಾಲಕರಿಗೆ ತಿಳಿಸಿ ಮನೆಯಿಂದ ಹೊರಹೋಗಿದ್ದ ಯುವತಿಯೊಬ್ಬಳು ಎರಡು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಹೈದರ ಗ್ರಾಮದಲ್ಲಿ ನಡೆದಿದೆ.
ಕಾಣೆಯಾದ ಯುವತಿಯನ್ನು ಕನಕಗಿರಿ ನಿವಾಸಿ ಮಲ್ಲಮ್ಮ ಅಶೋಕ ಜಾಡಿ (19) ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ವತಃ ಯುವತಿಯ ತಂದೆ ಹುಲಿಹೈದರದ ಕಟ್ಟಿಗೆ ವ್ಯಾಪಾರಿ ಅಶೋಕ ಜಾಡಿ ಕನಕಗಿರಿ ಪೊಲೀಸರಿಗೆ ದೂರು ನೀಡಿ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
![girl missing in gangavathi](https://etvbharatimages.akamaized.net/etvbharat/prod-images/kn-gvt-06-17-younger-girl-missed-when-she-is-out-pic-kac10005_17092020152729_1709f_1600336649_288.jpg)
ವ್ಯಾಪಾರದ ಉದ್ದೇಶಕ್ಕೆ ತಾವು ಹುಲಿಹೈದರದಲ್ಲಿ ವಾಸ ಮಾಡುತ್ತಿದ್ದು, ಮಗಳು ಕನಕಗಿರಿಯ ತಮ್ಮ ಇನ್ನೊಂದು ಮನೆಯಲ್ಲಿ ಇರುತ್ತಿದ್ದಳು. ಆದರೆ ಸೆ.14ರಂದು ಸಂಜೆ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ. ಹುಡುಕಿ ಕೊಡುವಂತೆ ಪೊಲೀಸರಿಗೆ ಯುವತಿಯ ತಂದೆ ಮನವಿ ಮಾಡಿದ್ದಾರೆ.