ETV Bharat / state

ಕೊಪ್ಪಳ: ನೀರು ತರಲು ಹೋದ ಬಾಲಕಿ ಹೊಂಡಕ್ಕೆ ಬಿದ್ದು ಸಾವು - ಹೊಲದಲ್ಲಿದ್ದ ಹೊಂಡಕ್ಕೆ ನೀರು ತರಲು ಹೋದ ಬಾಲಕಿ ನೀರಲ್ಲಿ ಮುಳುಗಿ ಸಾವು

ಹೊಲದಲ್ಲಿದ್ದ ಹೊಂಡಕ್ಕೆ ನೀರು ತರಲು ಹೋದ ಬಾಲಕಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾಳೆ. ಕೊಪ್ಪಳ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

girl-dies-after-falling-into-water-pits
ನೀರಿನ ಹೊಂಡಕ್ಕೆ ಬಿದ್ದು ಬಾಲಕಿ ಸಾವು
author img

By

Published : Feb 27, 2022, 5:00 PM IST

ಕೊಪ್ಪಳ : ಹೊಲದಲ್ಲಿದ್ದ ಹೊಂಡಕ್ಕೆ ನೀರು ತರಲು ಹೋಗಿದ್ದ ಬಾಲಕಿಯೋರ್ವಳು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಇಂದು ನಡೆದಿದೆ. ತಲ್ಲೂರು ತಾಂಡಾ ಮೂಲದ ನಂದಿನಿ ಎಂಬ ಎಂಟು ವರ್ಷದ ಬಾಲಕಿ ಮೃತಳು.

ತಂದೆ ತಾಯಿಯೊಂದಿಗೆ ಕುರಿ ಕಾಯಲು ಬಂದಿದ್ದ ಈ ಬಾಲಕಿ ಇಂದು ಬೆಳಗ್ಗೆ ನೀರು ತರಲೆಂದು ಜಮೀನಿನಲ್ಲಿದ್ದ ಹೊಂಡಕ್ಕೆ ಬಂದಿದ್ದಳು. ಆಗ ಕಾಲು ಜಾರಿ ಬಿದ್ದು ಬಾಲಕಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಹೊಂಡದಲ್ಲಿದ್ದ ಬಾಲಕಿಯ ಮೃತದೇಹವನ್ನು ಅಗ್ನಿ ಶಾಮಕದಳ ಸಿಬ್ಬಂದಿಯ ಸಹಾಯದಿಂದ ಹೊರ ತೆಗೆಯಲಾಗಿದೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಓದಿ :ಉಕ್ರೇನ್‌ನಿಂದ ದೆಹಲಿಗೆ ಬಂದಿಳಿದ ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.