ಕೊಪ್ಪಳ: ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಸೋಂಕಿತರಿಗೆ ಆತ್ಮವಿಶ್ವಾಸ ತುಂಬಲಾಗುತ್ತಿದೆ. ಇದೀಗ ಮಠದ ಅರ್ಚಕರು, ದೇವರ ಧ್ಯಾನ ಮಾಡಿಸುವ ಮೂಲಕ ಸೋಂಕಿತರಲ್ಲಿ ಮಾನಸಿಕ ನೆಮ್ಮದಿ, ಧೈರ್ಯ ತುಂಬುತ್ತಿದ್ದಾರೆ.
ಗವಿಮಠದ ಕೊವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಪ್ರತಿದಿನ ಯೋಗ, ವ್ಯಾಯಾಮದ ಮಾಡಿಸುವ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರತಿದಿನ ಸಂಜೆ 7 ಗಂಟೆಗೆ ಗವಿಮಠದ ಅರ್ಚಕರು ದೇವರ ನಾಮಸ್ಮರಣೆ, ಧ್ಯಾನ, ಮಾನಸಿಕ ನೆಮ್ಮದಿಗಾಗಿ ದೇವರ ಸ್ತುತಿ ಪಠಣ ಮಾಡಿಸುತ್ತಾರೆ. ಇದರಿಂದ ಸೋಂಕಿತರಲ್ಲಿ ಗುಣಮುಖರಾಗುವ ಆತ್ಮವಿಶ್ವಾಸ ಹೆಚ್ಚುತ್ತಿದೆ. ಈ ವೇಳೆ ಎಲ್ಲಾ ಧರ್ಮದ ದೇವರ ಸ್ಮರಣೆ ಮಾಡಿಸಲಾಗ್ತಿದೆ.
ತೀವ್ರ ಅನಾರೋಗ್ಯದಿಂದ ವೆಂಟಿಲೇಟರ್ನಲ್ಲಿರುವವರು ಸಹ ಭಜನೆ ಮಾಡುತ್ತಾ ದೇವರನ್ನು ಸ್ಮರಿಸುತ್ತಾರೆ. ಸದ್ಯ ಗವಿಮಠದ ಕೋವಿಡ್ ಆಸ್ಪತ್ರೆಯಲ್ಲಿ 75 ಸೋಂಕಿತರಿದ್ದಾರೆ.
ಓದಿ: ಚಿತ್ರದುರ್ಗದಲ್ಲಿ ಹೊಸದಾಗಿ 11 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ