ಗಂಗಾವತಿ: ರಾಜ್ಯದಲ್ಲಿ ಇನ್ನು ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಆದರೆ, ಗಂಗಾವತಿಯಲ್ಲಿ ಮಾತ್ರ ಈ ಆದೇಶ ಜಾರಿಯಲ್ಲಿ ಇಲ್ಲ ಎಂಬಂತಾಗಿದೆ.
ಪೊಲೀಸರು ಲಾಕ್ಡೌನ್ಗೆ ವಿನಾಯಿತಿ ನೀಡಿದ್ದಾರೆ ಎಂಬ ವದಂತಿ ಹಿನ್ನೆಲೆ ಜನರು ಮನೆಯಿಂದ ಆಚೆಬಂದು ಎಂದಿನಂತೆ ಸಂಚಾರ ನಡೆಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.
ಇಲ್ಲಿನ ಮಹಾತ್ಮಗಾಂಧಿ ವೃತ್ತವೊಂದನ್ನು ಬಿಟ್ಟರೆ, ಮಿಕ್ಕ ಎಲ್ಲಾ ರಸ್ತೆಗಳಲ್ಲಿ ಜನ ಸಂಚಾರ ಸಾಮಾನ್ಯವಾಗಿತ್ತು. ಇಲ್ಲಿನ ಮಹಾವೀರ ವೃತ್ತ, ಓಎಸ್ಬಿ ರಸ್ತೆ, ಗಣೇಶ ವೃತ್ತ, ನೀಲಕಂಠೇಶ್ವರ ವೃತ್ತ, ಬಸ್ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ಜನ ಸಂಚಾರ ಕಂಡು ಬಂತು.