ಗಂಗಾವತಿ: ಇದೇ ಮೊದಲ ಬಾರಿಗೆ 15ನೇ ಹಣಕಾಸು ಯೋಜನೆಯಲ್ಲಿ ತಾಲೂಕು ಪಂಚಾಯಿತ್ಗೆ ಸರ್ಕಾರ 11.17 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಇದಕ್ಕೆ ಕ್ರಿಯಾಯೋಜನೆ ರೂಪಿಸಬೇಕಿರುವ ಹಿನ್ನೆಲೆ ಸಭೆ ನಡೆಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತ್ ಇಒ ಡಾ.ಡಿ.ಮೋಹನ್ ತಿಳಿಸಿದರು.
ವಾಸ್ತವಾಗಿ ತಾಲೂಕು ಪಂಚಾಯತ್ಗೆ ಕೇವಲ ಒಂದು ಕೋಟಿ ಹದಿನೇಳು ಲಕ್ಷ ಮೊತ್ತದ ಅನುದಾನ ಮಂಜೂರಾಗಿದ್ದು, ತಾ.ಪಂ. ಇಒ ಮಾತ್ರ ಅಚಾನಕ್ ಆಗಿ ಹನ್ನೊಂದು ಕೋಟಿ ಮೊತ್ತದ ಅನುದಾನ ಬಿಡುಗಡೆಯಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ಇಒ ನೀಡಿದ ಹೇಳಿಕೆಯಿಂದಾಗಿ ಇಡೀ ಸಭೆಯಲ್ಲಿನ ಬಹುತೇಕ ಸದಸ್ಯರು ಒಂದು ಕ್ಷಣ ತಬ್ಬಿಬ್ಬಾದರು. ಇಷ್ಟು ಹಣವನ್ನು ಸರ್ಕಾರ ನಿಗದಿ ಮಾಡಿದೆ, ಜನಸಂಖ್ಯಾ ಆಧಾರದ ಮೇಲೆ ಅನುದಾನ ಮಂಜೂರಾಗಿದ್ದು, ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ವಿವರಣೆ ನೀಡಿದರು.
ಬಳಿಕ ಪಂಚಾಯತ್ ಸಿಬ್ಬಂದಿ ಸರ್ಕಾರದಿಂದ ಬಿಡುಗಡೆಯಾಗಿರುವುದು ಒಂದು ಕೋಟಿ 17 ಲಕ್ಷ ಎಂದು ಇಒ ಗಮನಕ್ಕೆ ತರುತ್ತಿದ್ದಂತೆ, ಇಒ 15ನೇ ಹಣಕಾಸಿನಲ್ಲಿ ಒಂದು ಕೋಟಿ ಹಣ ಬಿಡುಗಡೆಯಾಗಿದೆ ಎಂದು ಸ್ಪಷ್ಟಪಡಿಸಿದರು.