ETV Bharat / state

ಹೊರರಾಜ್ಯಗಳಿಗೆ ಹೋಗುವ ಸಾರಿಗೆ ಬಸ್​ಗಳೇ ಹೆಚ್ಚು; ಗಂಗಾವತಿ ಮಹಿಳೆಯರಿಗೆ ಸಿಗ್ತಿಲ್ಲ ಉಚಿತ ಶಕ್ತಿ ಯೋಜನೆ ಭಾಗ್ಯ - ಸಾರಿಗೆ ಬಸ್

ರಾಜ್ಯದ ಗಡಿ ಜಿಲ್ಲೆಗಳಲ್ಲಿ ಶಕ್ತಿ ಯೋಜನೆಗೆ ಗ್ರಹಣ ಉಂಟಾಗಿದೆ. ಗಂಗಾವತಿಯಿಂದ ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 5.30ರಿಂದ 8 ಗಂಟೆವರೆಗೆ ಮಂತ್ರಾಲಯ, ಅನಂತಪುರದತ್ತ ಸಾರಿಗೆ ಬಸ್​ಗಳು ಸಂಚರಿಸುತ್ತಿವೆ. ರಾಜ್ಯದೊಳಗೆ ಸಂಚರಿಸುವ ಬಸ್​ಗಳು ಇಲ್ಲದೇ ಇರುವುದರಿಂದ ನಿತ್ಯ ಬಳ್ಳಾರಿಗೆ ವಿದ್ಯಾರ್ಥಿನಿಯರು, ಮಹಿಳೆಯರು ಹಣ ಕೊಟ್ಟು ಪ್ರಯಾಣ ಬೆಳೆಸಬೇಕಿದೆ.

bus traveling to Andhra Pradesh
ಆಂಧ್ರಪ್ರದೇಶಕ್ಕೆ ಹೊರಟ ಸಾರಿಗೆ ಬಸ್​
author img

By

Published : Jun 13, 2023, 4:13 PM IST

Updated : Jun 13, 2023, 5:51 PM IST

ಗಂಗಾವತಿ ಮಹಿಳೆಯರಿಗೆ ಸಿಗ್ತಿಲ್ಲ ಉಚಿತ ಶಕ್ತಿ ಯೋಜನೆ ಭಾಗ್ಯ

ಗಂಗಾವತಿ (ಕೊಪ್ಪಳ): ಮಹಿಳೆಯರ ಸ್ವಾವಲಂಬನೆಯ ಬದುಕಿಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಸೌಲಭ್ಯ ಲಭ್ಯವಾಗುತ್ತಿದೆ. ಈ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಗಂಗಾವತಿಯ ಮಹಿಳೆಯರು ಈ ಮಹತ್ವಾಕಾಂಕ್ಷಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ನಗರದಿಂದ ಪ್ರತಿನಿತ್ಯ ಬಳ್ಳಾರಿಗೆ ಸಂಚರಿಸುವ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರಿಗೆ ಯೋಜನೆಯ ಅನುಕೂಲ ಸಿಗುತ್ತಿಲ್ಲ.

ನಗರದಿಂದ ನಿತ್ಯ ಬಳ್ಳಾರಿಗೆ ಬೆಳಗ್ಗೆ 6ರಿಂದ 8.30ರ ವರೆಗೆ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿನಿಯರು, ಕೃಷ್ಣದೇವರಾಯ ವಿಶ್ವವಿದ್ಯಾಲಯ, ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮಹಿಳಾ ಉದ್ಯೋಗಿಗಳು ಸೇರಿದಂತೆ ನಾನಾ ಇಲಾಖೆಯ ಮಹಿಳಾ ನೌಕರರು ಬಳ್ಳಾರಿಗೆ ಹೋಗುತ್ತಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕವೂ ನಿತ್ಯ ಇವರು ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ. ಇದಕ್ಕೆ ಕಾರಣ ಇಷ್ಟೇ. ಬೆಳಗ್ಗೆ 5.30ರಿಂದ 8 ಗಂಟೆಯವರೆಗೆ ಗಂಗಾವತಿಯಿಂದ ಬಳ್ಳಾರಿ ಮಾರ್ಗವಾಗಿ ಹೋಗುವ ಎಲ್ಲ ಸಾರಿಗೆ ಬಸ್​ಗಳು ಅಂತರ್‌ರಾಜ್ಯಕ್ಕೆ ಹೋಗುತ್ತಿವೆ.

ಹೀಗಾಗಿ ಈ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಗಂಗಾವತಿಯಿಂದ ಬಳ್ಳಾರಿಯತ್ತ ಬೆಳಗ್ಗೆ 5.30ಕ್ಕೆ ಗಂಗಾವತಿ ಬಳ್ಳಾರಿ ಮಧ್ಯೆ ಸಾರಿಗೆ ಬಸ್​ ಸೇವೆ ಆರಂಭವಾಗುತ್ತಿದೆ.
ಬೆಳಗ್ಗೆ 5.30ಕ್ಕೆ ಬಳ್ಳಾರಿ ಮಾರ್ಗವಾಗಿ ಮಂತ್ರಾಲಯ, ಬಳಿಕ 6.15ಕ್ಕೆ ಬಳ್ಳಾರಿ ಮಾರ್ಗವಾಗಿ ಅನಂತಪುರ, ಬೆಳಗ್ಗೆ 7 ಗಂಟೆಗೆ ಬಳ್ಳಾರಿ ಮಾರ್ಗವಾಗಿ ಮತ್ತೊಂದು ಅನಂತಪುರಕ್ಕೆ ಹೋಗುವ ಬಸ್​ ಇದೆ. 7.15ಕ್ಕೆ ಗಂಗಾವತಿ-ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಕೊಪ್ಪಳ- ಮಂತ್ರಾಲಯ ಬಸ್​ ಇದೆ. ವಾಹನ ಸೇವೆ ಇದೆಯಾದರೂ ಮಹಿಳೆಯರಿಗೆ ಈ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಮಧ್ಯಾಹ್ನ ಒಂದು ಗಂಟೆಯ ನಂತರ ಗಂಗಾವತಿಯತ್ತ ಬರುವ ಬಳ್ಳಾರಿ ಡಿಪೋದ ವಾಹನಗಳ ಸಂಚಾರ ಸ್ಥಗಿತವಾಗುತ್ತದೆ. ಆ ಬಳಿಕ ಅನಿವಾರ್ಯವಾಗಿ ಸಂಜೆಯೂ ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಗಂಗಾವತಿಯಿಂದ ಬಳ್ಳಾರಿಗೆ ರಾಜ್ಯದೊಳಗೆ ಸಂಚರಿಸುವ ವಾಹನ ಸೇವೆ ಆರಂಭವಾಗುವುದು 8.30ರ ಬಳಿಕ. ಗಂಗಾವತಿಯಿಂದ ಬಳ್ಳಾರಿಗೆ ಸಾರಿಗೆ ವಾಹನದಲ್ಲಿ ಹೋಗಲು ಕನಿಷ್ಟ ಎರಡು ಗಂಟೆ ಸಮಯ ಹಿಡಿಯುತ್ತದೆ. 8.30ರ ಬಳಿಕ ಗಂಗಾವತಿಯಿಂದ ಹೊರಟರೆ ನಿಗದಿತ ಅವಧಿಯೊಳಗೆ ಕಾಲೇಜು ಅಥವಾ ಇಲಾಖೆಯಲ್ಲಿ ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಬೆಳಗ್ಗೆ 8 ಗಂಟೆಗೂ ಮುನ್ನ ಗಂಗಾವತಿಯಿಂದ ತೆರಳುತ್ತಿದ್ದು ಅನಿವಾರ್ಯವಾಗಿ ಹಣ ಕೊಟ್ಟೇ ಪ್ರಯಾಣ ಮಾಡಬೇಕಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ಮಹಿಳಾ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿನಿಯರದ್ದು ಒಂದೇ ಬೇಡಿಕೆ. ರಾಜ್ಯದ ಸಾರಿಗೆ ಇಲಾಖೆಯ ವಾಹನ ಅಂತರ್‌ರಾಜ್ಯ ಸಂಚಾರ ಮಾಡಿದರೂ ಅವರಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವೇ, ಬೆಳಗ್ಗೆ ಆರು ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಗಂಗಾವತಿ-ಬಳ್ಳಾರಿ ಮಧ್ಯ ವಾಹನ ಸೇವೆ ಆರಂಭಿಸಬೇಕು. ಬಳ್ಳಾರಿಯಿಂದ ಪುನಃ ಸಂಜೆ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗೂ ವಾಹನ ಸೇವೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂಓದಿ: Electricity bill: ದುಪ್ಪಟ್ಟು ವಿದ್ಯುತ್ ಬಿಲ್‌ಗೆ ಹೈರಾಣಾದ ದಾವಣಗೆರೆ ಹಳೇಬಾತಿ ಗ್ರಾಮಸ್ಥರು; ಸರ್ಕಾರದ ವಿರುದ್ಧ ಆಕ್ರೋಶ

Last Updated : Jun 13, 2023, 5:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.