ETV Bharat / state

ವೃದ್ಧಾಶ್ರಮದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಹುಟ್ಟುಹಬ್ಬ ಆಚರಣೆ - Gangavathi Comedy Speaker b. Pranesh Birthday

ಕೊರೊನಾದ ಹಿನ್ನೆಲೆ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿಯ ಬಿ. ಪ್ರಾಣೇಶ್​ (ಬೀಚಿ) ಅವರು ತಮ್ಮ ಹುಟ್ಟುಹಬ್ಬವನ್ನು ಗಂಗಾವತಿಯ ಹೊರವಲಯದಲ್ಲಿರುವ ನವಜೀವನ ವೃದ್ಧಾಶ್ರಮ ಮತ್ತು ಅನಾಥಾಲಯದಲ್ಲಿ ಸರಳವಾಗಿ ಆಚರಿಸಿಕೊಂಡರು.

Gangavathi
ವೃದ್ಧಾಶ್ರಮದಲ್ಲಿ ಗಂಗಾವತಿ ಪ್ರಾಣೇಶ್ ಹುಟ್ಟುಹಬ್ಬ ಆಚರಣೆ
author img

By

Published : Sep 9, 2020, 6:02 PM IST

ಗಂಗಾವತಿ: ಕೊರೊನಾದ ಹಿನ್ನೆಲೆ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿಯ ಬಿ. ಪ್ರಾಣೇಶ್​ (ಬೀಚಿ) ಅವರು ತಮ್ಮ ಹುಟ್ಟುಹಬ್ಬವನ್ನು ನಗರದ ಹೊರವಲಯದಲ್ಲಿರುವ ನವಜೀವನ ವೃದ್ಧಾಶ್ರಮ ಮತ್ತು ಅನಾಥಾಲಯದಲ್ಲಿ ಸರಳವಾಗಿ ಆಚರಿಸಿಕೊಂಡರು.

ಆಪ್ತರು ಮತ್ತು ಆಯ್ದ ಅಭಿಮಾನಿಗಳೊಂದಿಗೆ ವೃದ್ಧಾಶ್ರಮಕ್ಕೆ ತೆರಳಿದ್ದ ಅವರು, ಅಲ್ಲಿನ ವೃದ್ಧರಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ನೀಡಿದರು. ಕೆಲ ಹಿರಿಯ ಜೀವಗಳೊಂದಿಗೆ ಆತ್ಮೀಯವಾಗಿ ಮಾತನಾಡಿ ಜೀವನದ ಅನುಭವಗಳನ್ನು ಹಂಚಿಕೊಂಡರು.

Gangavathi
ವೃದ್ಧಾಶ್ರಮದಲ್ಲಿ ಗಂಗಾವತಿ ಪ್ರಾಣೇಶ್ ಹುಟ್ಟುಹಬ್ಬ ಆಚರಣೆ

ಬಳಿಕ ಅನಾಥಾಲಯದಲ್ಲಿ ಏರ್ಪಡಿಸಿದ್ದ ಸಣ್ಣದೊಂದು ಸಭೆಯಲ್ಲಿ ಹಾಸ್ಯ ಭಾಷಣ ಹಾಗೂ ಚಟಾಕಿಗಳನ್ನು ಹಾರಿಸುವ ಮೂಲಕ ಬೀಚಿ, ನಾನಾ ಕಾರಣಕ್ಕೆ ಮನೆ, ಮಕ್ಕಳನ್ನು ತೊರೆದು ವೃದ್ಧಾಶ್ರಮದ ಗೂಡು ಸೇರಿದ ಹಿರಿಯ ಜೀವಗಳ ಮೊಗದಲ್ಲಿ ನಗೆಯುಕ್ಕಿಸಲು ಯತ್ನಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.