ಗಂಗಾವತಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಸಿಎಂ ಪರಿಹಾರ ನಿಧಿ ಕೂಡ ಒಂದು. ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ತಮ್ಮ ಎರಡು ತಿಂಗಳ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿ ಸ್ಥಾಪಿಸಿದೆ.
ಇದಕ್ಕೆ ಗಂಗಾವತಿ ಶಾಸಕ ಪ್ರವಾಸ ಭತ್ಯೆ, ಮನೆ ಬಾಡಿಗೆ ಸೇರಿ ಎರಡು ತಿಂಗಳ ಒಟ್ಟು 1.80 ಲಕ್ಷ ರೂ. ದಿಂದ ಎರಡು ಲಕ್ಷ ಮೊತ್ತದ ವೇತನ ಶಾಸಕರಿಗೆ ಸಿಗಲಿದ್ದು, ಈ ಎಲ್ಲಾ ಮೊತ್ತವನ್ನು ಮುನವಳ್ಳಿ ನೀಡಿದ್ದಾರೆ.