ETV Bharat / state

'ಪರಿಸರಕ್ಕಾಗಿ ಶ್ರಮದಾನ': ಸಸಿನೆಟ್ಟು ಸಾಥ್ ನೀಡಿದ ಬಿಇಒ - ಗಂಗಾವತಿ ಪರಿಸರಕ್ಕಾಗಿ ಶ್ರಮದಾನ ಕಾರ್ಯಕ್ರಮ

ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಸಮಾನ ಮನಸ್ಕ ಯುವಕರು ಸೇರಿ ಗ್ರೀನ್ ಫೋರ್ಸ್‌ (ಹಸಿರುಪಡೆ) ಎನ್ನುವ ತಂಡವನ್ನು ಕಟ್ಟಿಕೊಂಡು ಈ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.

Gangavathi
Gangavathi
author img

By

Published : Jul 13, 2020, 11:42 AM IST

ಗಂಗಾವತಿ: ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ 'ಪರಿಸರಕ್ಕಾಗಿ ಶ್ರಮದಾನ' ಎನ್ನುವ ಕಾರ್ಯಕ್ರಮವನ್ನು ಹಸಿರುಪಡೆ ಆಯೋಜಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಸಸಿನೆಟ್ಟು ಸಾಥ್ ನೀಡಿದರು.

ತಾಲೂಕಿನ ಶ್ರೀರಾಮನಗರದಲ್ಲಿ ಸಮಾನ ಮನಸ್ಕ ಯುವಕರು ಸೇರಿ ಗ್ರೀನ್ ಫೋರ್ಸ್‌(ಹಸಿರುಪಡೆ) ಎನ್ನುವ ತಂಡವನ್ನು ಕಟ್ಟಿಕೊಂಡು ಈ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ ನೇತೃತ್ವದಲ್ಲಿ ಯುವಕರು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಮಸ್ಕಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಪಂಪನಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡುವುದು, ನಿಯಮಿತವಾಗಿ ನೀರು, ಗೊಬ್ಬರ ಹಾಕಿ ಗಿಡಗಳ ಪೋಷಣೆ ಮಾಡುವಂತಹ ಕಾರ್ಯವನ್ನು ಈ ಹಸಿರು ಪಡೆ ಮಾಡುತ್ತಿದೆ. ಈಗಾಗಲೇ ಹಸಿರುಪಡೆ ಹುಡುಗರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗ್ರಾಮದ ರಸ್ತೆ, ಸರ್ಕಾರಿ ಕಚೇರಿ, ಶಾಲೆ - ಕಾಲೇಜು, ದೇವಸ್ಥಾನ, ಮಸೀದಿ, ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.