ETV Bharat / state

ಆಹಾರದ ಗುಣಮಟ್ಟ ಪರಿಶೀಲಿಸಲು ದಿಢೀರ್ ರಿಯಾಲಿಟಿ ಚೆಕ್​ಗೆ ಮುಂದಾದ ಪೌರಾಯುಕ್ತ - gangavathi commissioner had sanitisation workers food

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಆಹಾರದ ಬಗ್ಗೆ ನೌಕರರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಖುದ್ದು ಪೌರಾಯುಕ್ತರೇ ಆ ಉಪಹಾರ ಸೇವಿಸುವ ಮೂಲಕ ಕ್ವಾಲಿಟಿ​ ಚೆಕ್​ ಮಾಡಿದ್ದಾರೆ.

gangavathi commissioner sudden visits  to check food quality
ನಗರಸಭೆಯ ಪೌರ ನೌಕರರಿಗೆ ಉಪಹಾರ
author img

By

Published : Nov 7, 2020, 3:18 PM IST

ಗಂಗಾವತಿ: ನಗರಸಭೆಯ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರದ ಬಗ್ಗೆ ರಿಯಾಲಿಟಿ ಚೆಕ್ ಮಾಡುವ ಉದ್ದೇಶದಿಂದ ಪೌರಾಯುಕ್ತ ಅರವಿಂದ್ ಜಮಖಂಡಿ ದಿಢೀರ್ ಭೇಟಿ ನೀಡಿ ತಾವೂ ಉಪಹಾರ ಸೇವಿಸಿದ್ದಾರೆ.

ನಗರಸಭೆಯ ಪೌರಕಾರ್ಮಿಕರಿಗೆ ಉಪಹಾರ

ನಗರಸಭೆಯ 158 ಪೌರಕಾರ್ಮಿಕರಿಗೆ ನಿತ್ಯ ಬೆಳಗ್ಗೆ ಉಪಹಾರ ನೀಡಲಾಗುತ್ತಿದೆ. ನಗರಸಭೆಯ ಈ ಉಪಹಾರ ಪೂರೈಸುವ ಕಾಮಗಾರಿಯನ್ನು ಖಾಸಗಿ ಸಂಸ್ಥೆಯೊಂದು ವಹಿಸಿಕೊಂಡಿದ್ದು, ಕಳೆದ ಕೆಲ ದಿನಗಳ ಹಿಂದೆ ಗುಣಮಟ್ಟದ ಬಗ್ಗೆ ಪೌರಕಾರ್ಮಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಸ್ವತಃ ಪೌರಾಯುಕ್ತರೇ ಫೀಲ್ಡಿಗಿಳಿದು, ಉಪಹಾರದ ಗುಣಮಟ್ಟ ಪರೀಕ್ಷಿಸಿದರು. ಮಕ್ಕಳ ಉದ್ಯಾನವನ, ನೆಹರು ಪಾರ್ಕ್, ಗುಂಡಮ್ಮ ಕ್ಯಾಂಪ್ ಸೇರಿದಂತೆ ಒಟ್ಟು ಐದು ಕಡೆ ಉಪಹಾರ ವಿತರಿಸಲಾಗುತ್ತಿದ್ದು, ಎರಡು ಸ್ಥಳಗಳಿಗೆ ಭೇಟಿ ನೀಡಿದ ಪೌರಾಯುಕ್ತ ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.