ಗಂಗಾವತಿ: ಸ್ನೇಹಿತರ ದಿನಾಚರಣೆಗೆ ಸಾಮಾನ್ಯವಾಗಿ ಗೆಳೆಯರು ಪರಸ್ಪರ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಕೊಂಡು ತಮ್ಮ ಫ್ರೆಂಡ್ ಶಿಪ್ ಡೇಯನ್ನು ಆಚರಿಸುತ್ತಾರೆ. ಆದರೆ, ಇಲ್ಲಿನ ಶ್ರೀರಾಮನಗರದ ಪರಿಸರ ಪ್ರೇಮಿಗಳು ಮರ-ಗಿಡಗಳಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ವಿಭಿನ್ನವಾಗಿ ಫ್ರೆಂಡ್ ಶಿಪ್ ಡೇ ಆಚರಿಸಿದರು.
ಶ್ರೀರಾಮನಗರದ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡದ ಸದಸ್ಯರು ಮಾಡುತ್ತಿರುವ ಹಸಿರು ಸೇವೆಯಿಂದ ಪ್ರೇರಣೆಗೊಂಡ ಕೆಲವು ಗ್ರಾಮಸ್ಥರು ಮರ ಗಿಡಗಳಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹಿತರ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಮೊಹಮ್ಮದ್ ರಫಿ, ಪರಿಸರದ ಜೊತೆಗೆ ನಾವು ಬೆಳೆಯಬೇಕು. ಪರಿಸರ ಮಾತ್ರ ನಮ್ಮನ್ನು ಪೋಷಿಸಿ ಬೆಳೆಸುತ್ತದೆ. ಹೀಗಾಗಿ ಅದರೊಂದಿಗೆ ನಮ್ಮ ಸ್ನೇಹಿ ಸಂಬಂಧ ಗಟ್ಟಿಯಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವ ಪ್ರೇರಣೆಯಿಂದ ಗ್ರಾಮದಲ್ಲಿ ನೂರಾರು ಗಿಡಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದ ಗ್ರಾಮದ ಉದ್ಯಮಿ ಹಾಗೂ ಪರಿಸರ ಪ್ರೇಮಿ ಬೃಗಮುಳ್ಳಿ ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಗಂಗಾವತಿ ಸೇತುವೆ ಮೇಲೆ ಸಂಚಾರ ನಿರ್ಬಂಧ; ಪರದಾಡಿದ ಪ್ರಯಾಣಿಕರು