ಗಂಗಾವತಿ: ವಿದ್ಯಾಗಮ ಯೋಜನೆ ಅಡಿಯಲ್ಲಿ ಪಾಠ ಪ್ರವಚನದಲ್ಲಿ ತೊಡಗಿಕೊಳ್ಳುವ ಮಕ್ಕಳಿಗೆ ತಾಲೂಕಿನ ಆನೆಗೊಂದಿ ಗ್ರಾಮದ ಯುವಕ ಪ್ರವೀಣ್ ಕುಮಾರ್, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಮಾಸ್ಕ್ ವಿತರಿಸಿದರು.
![ವಿದ್ಯಾಗಮದಲ್ಲಿ ಪಠ್ಯ ಆಲಿಸುವ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ](https://etvbharatimages.akamaized.net/etvbharat/prod-images/kn-gvt-04-02-gvt-free-mask-distribution-for-govt-school-childs-pic-kac10005_02092020193405_0209f_1599055445_289.jpg)
ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನ, ಗಾಳೆಮ್ಮ ದೇಗುಲ, ಗೂಗಿಬಂಡಿ, ಚಿಕ್ಕರಾಂಪೂರ ಗ್ರಾಮ ಸೇರಿದಂತೆ ನಾನಾ ದೇಗುಲಗಳ ಆವರಣದಲ್ಲಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯಲ್ಲಿ ಪಾಠ ಆಲಿಸುತ್ತಿರುವ ಸುಮಾರು 200 ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವಕ, ಶಾಲಾ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಕಾಳಜಿಯಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.