ಗಂಗಾವತಿ (ಕೊಪ್ಪಳ): ವ್ಯಕ್ತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ, ವೈದ್ಯರು ಹಾಗೂ ಸಿಬ್ಬಂದಿಯನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆನೆಗೊಂದಿ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ತಿರುಮಲ ಲಾಲಪ್ಪ ದಾಸಯ್ಯ, ಶ್ರೀನಿವಾಸ ಕೃಷ್ಣಯ್ಯ ಶ್ರೇಷ್ಠಿ, ಶಿವು ಪರಸಪ್ಪ ಗಂಗಾಮತ ಹಾಗೂ ರಾಘು ನಾಗಪ್ಪ ಮಡ್ಡೇರ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕರ್ನಾಟಕ ಎಪಿಡೆಮಿಕ್ ಡಿಸಿಸ್ ಆಕ್ಟ್-2020 ಹಾಗೂ ಕರ್ನಾಟಕ ಪ್ರೊಹಿಬಿಷನ್ ಆಫ್ ವೈಲೆನ್ಸ್ ಅಗೆನೆಸ್ಟ್ ಮೆಡಿಕೇರ್ ಸರ್ವೀಸ್, ಪರ್ಸನಲ್ ಡ್ಯಾಮೇಜ್ ಟು ಪ್ರಾಪರ್ಟಿ ಇನ್ಟಿಸ್ಟ್ಯೂಟ್ ಆಕ್ಟ್-2009 ಸೇರಿದಂತೆ ನಾನಾ ಪ್ರಕರಣದಡಿ ವೈದ್ಯ ರವಿಕುಮಾರ ದೂರು ದಾಖಲಿಸಿದ್ದಾರೆ.