ETV Bharat / state

ರಾಸುಗಳಿಗೆ ಕಾಲು-ಬಾಯಿ ರೋಗ; ಸೂಕ್ತ ಚಿಕಿತ್ಸೆ ಕೊಡಿಸುವಂತೆ ಪಶುವಿಜ್ಞಾನಿಗಳ ಸಲಹೆ - ಕೊಪ್ಪಳ ನ್ಯೂಸ್​

ಕೊಪ್ಪಳ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲು-ಬಾಯಿ ಮತ್ತು ಜ್ವರದ ಬಾಧೆ ಕಾಣಿಸಿಕೊಂಡಿದ್ದು, ರೈತರು ಹಾಗೂ ಹೈನು ಸಾಕಾಣಿಕೆದಾರರು ಮುಂಜಾಗ್ರತೆ ವಹಿಸಬೇಕು ಎಂದು ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಪಶುವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Foot-mouth disease for cows
ರಾಸುಗಳಿಗೆ ಕಾಲು-ಬಾಯಿ ರೋಗ ಬಾಧೆ: ಸೂಕ್ತ ಚಿಕಿತ್ಸೆ ಕೊಡಿಸುವಂತೆ ಪಶುವಿಜ್ಞಾನಿಗಳ ಸಲಹೆ
author img

By

Published : Oct 16, 2020, 8:10 PM IST

ಗಂಗಾವತಿ (ಕೊಪ್ಪಳ): ಜಿಲ್ಲೆಯಲ್ಲಿ ರಾಸುಗಳಿಗೆ ಕಾಲು-ಬಾಯಿ ಮತ್ತು ಜ್ವರದ ಬಾಧೆ ಕಾಣಿಸಿಕೊಂಡಿದ್ದು, ರೈತರು ಹಾಗೂ ಹೈನು ಸಾಕಾಣಿಕೆದಾರರು ಮುಂಜಾಗ್ರತೆ ವಹಿಸಬೇಕು ಎಂದು ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಪಶುವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಪಶುವಿಜ್ಞಾನಿ ಡಾ. ಮಹಾಂತೇಶ್ ಎಮ್.ಟಿ ಮಾತನಾಡಿ, ಪಶುಸಂಗೋಪನೆ ಇಲಾಖೆ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಜಿಲ್ಲೆಯಾದ್ಯಂತ ರಾಸುಗಳಿಗೆ ಕಾಲು-ಬಾಯಿ ರೋಗದ ಲಸಿಕೆಯನ್ನು ಹಾಕಲಾಗುತ್ತದೆ. ಪಶು ಪಾಲಕರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಈಗಾಗಲೇ ಕಾಲು-ಬಾಯಿ, ಜ್ವರ ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಹತ್ತಿರದ ಪಶು ವೈದ್ಯಾಧಿಕಾರಿಗಳಿಂದ ಸರಿಯಾದ ಚಿಕಿತ್ಸೆಯನ್ನು ಕೊಡಿಸಬೇಕು. ಈ ರೋಗವು ಸಾಂಕ್ರಾಮಿಕವಾಗಿದ್ದು, ಬೇಗನೆ ಒಂದು ರಾಸಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ 10 ರಿಂದ 250 ಕಿ.ಮೀ. ಗಳವರೆಗೆ ಹರಡುತ್ತದೆ. ರೋಗಗ್ರಸ್ತ ರಾಸುಗಳಲ್ಲಿ ಮೊದಲಿಗೆ ತೀವ್ರ ಜ್ವರ ಕಾಣಿಸಿಕೊಂಡು ಮೇವು ತಿನ್ನುವುದನ್ನು ನಿಲ್ಲಿಸಿ ಬಿಡುತ್ತವೆ. ಹಾಲು ಕಡಿಮೆಯಾಗಿ ನಂತರ ಕಾಲು ಕುಂಟು ಬೀಳುತ್ತದೆ. ಬಾಯಿಯಲ್ಲಿ ಚಿಕ್ಕ-ಚಿಕ್ಕ ನೀರು ಗುಳ್ಳೆಗಳಾಗಿ ಕ್ರಮೇಣ ಆ ಗುಳ್ಳೆಗಳು ಒಡೆದು ಜೊಲ್ಲು ಸುರಿಯುತ್ತದೆ. ಬಾಯಿ ಹುಣ್ಣಿನಿಂದಾಗಿ ಮೇವು ತಿನ್ನಲು ನಿರಾಕರಿಸುತ್ತದೆ. ರೋಗಗ್ರಸ್ತ ಕರುಗಳಲ್ಲಿ ಸಾವು ಉಂಟಾಗುತ್ತದೆ ಎಂದರು.

ಹಿರಿಯ ವಿಜ್ಞಾನಿ ಹಾಗೂ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಮ್.ವಿ.ರವಿ ಮಾತನಾಡಿ, ರೋಗ ಕಂಡುಬಂದ ರಾಸುಗಳಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ರೈತರು, ರಾಸುಗಳ ಸಾಕಾಣಿಕೆದಾರರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಪಡೆದುಕೊಳ್ಳಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.