ಗಂಗಾವತಿ (ಕೊಪ್ಪಳ): ಮೂಲಭೂತ ಹಕ್ಕಾದ ಶಿಕ್ಷಣ ಪ್ರತಿಯೊಬ್ಬ ಮಗುವಿಗೆ ಸಿಗಬೇಕು ಎಂಬ ಉದ್ದೇಶಕ್ಕೆ ಶ್ರಮಿಸುತ್ತಿರುವ ಬೆಂಗಳೂರಿನ ನನಗೂ ಶಾಲೆ ಫೋರ್ಥ್ ವೇವ್ ಫೌಂಡೇಷನ್ ಎಂಬ ಸಂಸ್ಥೆ ಸರಕಾರಿ ಶಾಲೆಯ ಮೂರು ಮಕ್ಕಳಿಗೆ ಆಹಾರದ ಕಿಟ್ ವಿತರಿಸಿತು.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಭೆಯಲ್ಲಿ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಸಂಚಾಲಕಿ, ಆನೆಗೊಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಅಂಜನಾದೇವಿ, ಗುರುತಿಸಲ್ಪಟ್ಟ ಸರಕಾರಿ ಶಾಲೆಯ ಮಕ್ಕಳಿಗೆ ವಿತರಿಸುವ ಉದ್ದೇಶಿತ ಕಿಟ್ಗಳನ್ನು ಆಯಾ ಮಕ್ಕಳ ಪಾಲಕರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅಂಜನಾದೇವಿ, ಬಡ ಮತ್ತು ಅಗತ್ಯತೆಯುಳ್ಳ ಮಕ್ಕಳನ್ನು ಈಗಾಗಲೆ ಗುರುತಿಸಲಾಗಿದೆ. ಅಂತಹ ಮಕ್ಕಳಿಗೆ ಆಹಾರದ ಕಿಟ್ ನೀಡುವ ಉದ್ದೇಶಕ್ಕೆ ಆಯಾ ಮಕ್ಕಳ ಪಾಲಕರಿಗೆ ಹಸ್ತಾಂತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಪ್ಪನಾಳ, ಶಿಕ್ಷಣ ಇಲಾಖೆ ಮತ್ತು ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.