ಕೊಪ್ಪಳ: ಅಗ್ನಿ ಆಕಸ್ಮಿಕದಿಂದ ಹತ್ತು ಮೇವಿನ ಬಣವೆಗಳು ಹೊತ್ತಿ ಉರಿದಿರುವ ಘಟನೆ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಇಂದು ಬೆಳಗಿನಜಾವ ನಡೆದಿದೆ.
ಅಗ್ನಿಯ ರೌದ್ರನರ್ತನಕ್ಕೆ ಕ್ಷಣಾರ್ಧದಲ್ಲೇ ಹೊತ್ತಿಕೊಂಡ ಬೆಂಕಿಯಿಂದ ಒಂದೇ ಕಡೆಯಿದ್ದ ಸುಮಾರು 10 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.