ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಆರ್ಹಾಳ ಗ್ರಾಮದಲ್ಲಿ ಅಕ್ರಮವಾಗಿ ಫಿಲ್ಟರ್ ಸ್ಯಾಂಡ್ ಮಾಡುತ್ತಿದ್ದ ಘಟಕದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರು ಆರೋಪಿಗಳ ಮೇಲೆ ದೂರು ದಾಖಲಿಸಿದ್ದಾರೆ.
![Filter and sand mafia in Gangavthi](https://etvbharatimages.akamaized.net/etvbharat/prod-images/kn-gvt-03-16-filter-sand-mince-and-revenue-ride-pic-kac10005_16062020123941_1606f_1592291381_531.jpg)
ತಾಲೂಕಿನ ಆರ್ಹಾಳ ಗ್ರಾಮದ ಶಿವಕುಮಾರ ಶಿವಪ್ಪ ಹಾಗೂ ಬಸವರಾಜ ದೇವೇಂದ್ರಪ್ಪ ಎಂಬ ಆರೋಪಿಗಳ ಮೇಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರೂಪಾ ದೂರು ದಾಖಲಿಸಿದ್ದಾರೆ.
ಆರೋಪಿಗಳು ಆರ್ಹಾಳ ಗ್ರಾಮದಲ್ಲಿ ಸರ್ಕಾರಿ ಸ್ಥಳ ಒತ್ತುವರಿ ಮಾಡಿಕೊಂಡಿದ್ದಲ್ಲದೇ ಸಿಮೆಂಟ್ ತೊಟ್ಟಿ ನಿರ್ಮಿಸಿ ಮಣ್ಣು ತಂದು ಫಿಲ್ಟರ್ ಮಾಡಿ ಅಸ್ವಾಭಾವಿಕ ಮರಳು ತಯಾರಿಸುತ್ತಿದ್ದರು. ಹಾಗೆಯೇ ಇದನ್ನು ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂದು ದೂರು ದಾಖಲಿಸಲಾಗಿದೆ.