ಕೊಪ್ಪಳ/ಗಂಗಾವತಿ: ನಗರದಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ 21ಕ್ಕೂ ಹೆಚ್ಚು ಜನರಲ್ಲಿ ಆನೆಕಾಲು ರೋಗ ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ 1.10 ಲಕ್ಷ ಜನರಿಗೆ ಮಾತ್ರೆ ನೀಡುವ ಯೋಜನೆ ಹಮ್ಮಿಕೊಂಡಿದೆ.
ನಗರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸುವ ಮೂಲಕ ಕಾರ್ಯಕ್ರಮಕ್ಕೆ ಆರೋಗ್ಯಾಧಿಕಾರಿ ಚಕೋತಿ ಶರಣಪ್ಪ ಚಾಲನೆ ನೀಡಿದರು. ಡಿಇಸಿ ಎಂಬ ಮಾತ್ರೆ ತೆಗೆದುಕೊಳ್ಳುವುದರಿಂದ ಆನೆಕಾಲು (ಫೈಲೆರಿಯಾ) ರೋಗದಿಂದ ಮುಕ್ತಿ ಪಡೆಯಬಹುದು. ಕೇವಲ ಇಂದು ಮಾತ್ರವಲ್ಲ ಆ ಮಾತ್ರೆಯಿಂದ ಜೀವನ ಪರ್ಯಂತ ಕಾಯಿಲೆ ಹರಡದಂತೆ ತಡೆಯಬಹುದು ಎಂದರು.
ಕೊಲೆಕ್ಸ್ ಜಾತಿಯ ಸೊಳ್ಳೆಯಿಂದ ಇದು ಹರಡುತ್ತಿದ್ದು, ನಗರದ 1.10 ಲಕ್ಷ ಜನರಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದರು.