ಕೊಪ್ಪಳ: ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಕೆಜಿಗೆ 50ರಿಂದ 60 ರೂ. ದರವಿದೆ. ಇದನ್ನು ನೋಡಿ ನುಗ್ಗೆಕಾಯಿ ದುಬಾರಿಯಾಗಿದೆ ಎಂದು ಹೇಳುವುದು ಸಹಜ. ಆದರೆ ರೈತರಿಗೆ ಮಾತ್ರ ಇದರ ಅರ್ಧ ದರವೂ ಸಿಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ದರ ನೋಡಿದರೆ ಬೆಳೆದವರು ಹೆಸರಿಗೆ ಮಾತ್ರ ಹಿಗ್ಗುವಂತಾಗಿದೆ. ಇನ್ನೇನು ಮದುವೆ, ಜಾತ್ರೆ, ಹಬ್ಬ ಹರಿದಿನಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ನುಗ್ಗೆಕಾಯಿಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂದುಕೊಂಡಿದ್ದ ರೈತರಿಗೆ, ಮಧ್ಯವರ್ತಿಗಳ ಹಾವಳಿಯಿಂದ ಒಳ್ಳೆ ಬೆಲೆ ಸಿಗೋದು ಡೌಟು ಎನ್ನುವಂತಾಗಿದೆ.
ಮಾರುಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡೋರು ಕೆಜಿಗೆ 60 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಆದರೆ ರೈತರಿಂದ ಖರೀದಿಯಾಗುತ್ತಿರೋದು ಕೆಜಿಗೆ ಕೇವಲ 15ರಿಂದ 20 ರೂ. ಮಾತ್ರ. ಒಂದೆರಡು ವಾರಗಳ ಹಿಂದೆ ಒಳ್ಳೆಯ ಬೆಲೆ ಸಿಕ್ಕಿತ್ತು. ಈಗ ನಮಗೆ ಕ್ವಿಂಟಾಲ್ಗೆ ಕೇವಲ 1,500ರಿಂದ 20,00 ರೂ. ಸಿಗುತ್ತಿದೆ. ಇದರಿಂದ ರೈತರ ಬದುಕು ಬೀದಿಗೆ ಬೀಳುವಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ .