ಕೊಪ್ಪಳ: ಅಬಕಾರಿ ಇಲಾಖೆಯ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿಯ ಪಂಜಾಬಿ ಡಾಬಾದ ಮೇಲೆ ದಾಳಿ ನಡೆಸಿದಾಗ 3.6 ಕೆಜಿ ಓಪಿಯಮ್ ಹಸ್ಕ್ ಡ್ರಗ್ಸ್ ಹಾಗೂ 2 ಕೆಜಿ ಓಪಿಯಮ್ ಪೌಡರ್ ಪತ್ತೆಯಾಗಿದೆ.
ಅಲ್ಲದೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಜಿಎಂಎಸ್ ಓಪಿಯಮ್ ಪೆಸ್ಟ್ ಲಿಕ್ವಿಡ್ ದೊರೆತಿದ್ದು, 5.2 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದೆ.
ಡಾಬಾದ ಕುಲ್ವಿಂದರ್ ಸಿಂಗ್ ಎಂಬಾತನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.