ETV Bharat / state

ಕೊಪ್ಪಳದಲ್ಲಿ ಪ್ರತಿ ಗುರುವಾರ ನಡೆಯುತ್ತೆ ಸಾವಯವ ಸಂತೆ.. ನೀವೂ ಒಮ್ಮೆ ಭೇಟಿ ಕೊಡಿ.. - ಮಣ್ಣಿನೊಂದಿಗೆ ಮಾತುಕತೆ

2021ರ ಜನವರಿ 26ರಿಂದ ಆರಂಭವಾದ ರೈತರ ಸಂತೆಗೆ ಗ್ರಾಹಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮಾರುಕಟ್ಟೆಯಲ್ಲಿ ಕಲಬೆರಕೆ ಇಲ್ಲದ ಶುದ್ಧ ಧಾನ್ಯಗಳು, ಆಹಾರ ಉತ್ಪನ್ನಗಳು ಸಿಗುತ್ತಿಲ್ಲ ಎನ್ನುತ್ತಿರುವಾಗ ರೈತ ಸಂತೆಯಲ್ಲಿ ರೈತರೇ ಮಾರುವ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ..

ಸಾವಯವ ಸಂತೆ
ಸಾವಯವ ಸಂತೆ
author img

By

Published : Oct 8, 2021, 4:27 PM IST

ಕೊಪ್ಪಳ : ಜಿಲ್ಲೆಯಲ್ಲಿ ವಾರಕ್ಕೊಮ್ಮೆ (ಪ್ರತಿ ಗುರುವಾರ) ನಡೆಯುವ ಸಂತೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರಾಟ ಮಾಡುತ್ತಿದ್ದಾರೆ. ಈ ಸಂತೆಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಕೊಪ್ಪಳದಲ್ಲಿ ಪ್ರತಿ ಗುರುವಾರ ನಡೆಯುತ್ತೆ ಸಾವಯವ ಸಂತೆ..

ನಗರದ ತೋಟಗಾರಿಕೆ ಇಲಾಖೆ ಕಾರ್ಯಾಲಯದ ಆವರಣದಲ್ಲಿ ಪ್ರತಿ ಗುರುವಾರ ಈ ಸಂತೆ ನಡೆಸಲಾಗುತ್ತದೆ. ಇಲ್ಲಿ ರೈತರು ಸಾವಯವ ಕೃಷಿಯಲ್ಲಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ರೈತರು ಈ ಸಂತೆಗೆ ಬಂದು ತಮ್ಮ ಜಮೀನಿನಲ್ಲಿ ಬೆಳೆದ ಪೇರಲ, ನುಗ್ಗೆ, ಮೆಣಸಿನಕಾಯಿ, ತರಕಾರಿ, ಹಣ್ಣುಗಳು, ಸಿರಿಧಾನ್ಯಗಳು, ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕುಲಿ, ಬಿಸ್ಕೆಟ್​ ಹಾಗೂ ಜೇನು, ಅಣಬೆ ಸೇರಿ ತೋಟಗಾರಿಕಾ ಉತ್ಪನ್ನಗಳನ್ನ ಮಾರುತ್ತಾರೆ.

ಇದರ ಜೊತೆಗೆ ನಾಟಿಕೋಳಿ, ಮೊಟ್ಟೆಗಳು ಲಭ್ಯವಿರುತ್ತವೆ. ಇದರಿಂದಾಗಿ ಸಾವಯವ ಕೃಷಿಯಲ್ಲಿ ಬೆಳೆದ ಉತ್ಪನ್ನಗಳನ್ನು ಹಾಗೂ ಜವಾರಿ ಆಹಾರ ಉತ್ಪನ್ನಗಳನ್ನು ಬಯಸುವ ಗ್ರಾಹಕರು ಪ್ರತಿ ಗುರುವಾರ ಇಲ್ಲಿಗೆ ಬಂದು ಖರೀದಿಸುತ್ತಾರೆ.

ಕೊಪ್ಪಳದಲ್ಲಿ ಮಣ್ಣಿನೊಂದಿಗೆ ಮಾತುಕತೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ವಾರ ಸಾವಯವ ಕೃಷಿ ಮಾಡುವ ರೈತರು ಒಂದೆಡೆ ಸೇರಿ ಒಂದಿಷ್ಟು ಕೃಷಿ ಭೂಮಿಯ ಫಲವತ್ತತೆಯ ಬಗ್ಗೆ ಚರ್ಚೆ ಮಾಡುತ್ತಾರೆ. ಜಿಲ್ಲೆಯ 150 ರೈತರು ಸೇರಿ ನಡೆಸುವ ಮಣ್ಣಿನೊಂದಿಗೆ ಮಾತುಕತೆ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಕೊಪ್ಪಳದ ತೋಟಗಾರಿಕೆ ಇಲಾಖೆಯು ತಮ್ಮ ಕಚೇರಿ ಆವರಣದಲ್ಲಿ ಅವಕಾಶ ನೀಡಿದೆ.

ಇದನ್ನೂ ಓದಿ: Mysore Dussehra: ಗಜಪಡೆಗೆ ಪಟಾಕಿ ಸಿಡಿಸಿ ಹೆದರದಂತೆ ಪ್ರಾಕ್ಟೀಸ್​​​

2021ರ ಜನವರಿ 26ರಿಂದ ಆರಂಭವಾದ ರೈತರ ಸಂತೆಗೆ ಗ್ರಾಹಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮಾರುಕಟ್ಟೆಯಲ್ಲಿ ಕಲಬೆರಕೆ ಇಲ್ಲದ ಶುದ್ಧ ಧಾನ್ಯಗಳು, ಆಹಾರ ಉತ್ಪನ್ನಗಳು ಸಿಗುತ್ತಿಲ್ಲ ಎನ್ನುತ್ತಿರುವಾಗ ರೈತ ಸಂತೆಯಲ್ಲಿ ರೈತರೇ ಮಾರುವ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ಮೊದಮೊದಲು ಈ ಸಂತೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಕೊರೊನಾ ಕಾರಣಕ್ಕೆ ಲಾಕ್​ಡೌನ್​ ಆದಾಗಿನಿಂದ ವ್ಯಾಪಾರಕ್ಕೆ ಕೊಂಚ ಹಿನ್ನಡೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.