ETV Bharat / state

‘ನಂಗ್ ಕಾಟ ಕೊಡಬ್ಯಾಡ.. ಇಂಜೆಕ್ಷನ್​​ ಬ್ಯಾಡ್ರಿ’: ಲಸಿಕೆ ಹಾಕಲು ಬಂದ ಸಿಬ್ಬಂದಿ ಜೊತೆ ಹಳ್ಳಿ ಮಂದಿ​ ವಾಗ್ವಾದ​

ವೃದ್ಧರನ್ನ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುವುದೇ ಆರೋಗ್ಯ ಸಿಬ್ಬಂದಿಗೆ ಸವಾಲಾಗಿದೆ. ಈ ನಡುವೆ ಅಜ್ಜಿಯೊಬ್ಬರನ್ನ ಲಸಿಕೆ ಹಾಕಿಸುವಂತೆ ಕರೆದೊಯ್ಯಲು ಬಂದರೆ ವೃದ್ಧೆ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಲ್ಲದೆ, ಸಿಬ್ಬಂದಿ ಜೊತೆ ಮಾತಿಗಿಳಿದಿದ್ದಾಳೆ.

elderly-women-refused-to-get-vaccine-at-koppal
ಲಸಿಕೆ ಹಾಕಿಸಲು ಬಂದ ಸಿಬ್ಬಂದಿ ಜೊತೆ ಅಜ್ಜಿ ಟಾಕ್​ ಫೈಟ್​
author img

By

Published : Sep 18, 2021, 9:24 AM IST

Updated : Sep 18, 2021, 11:38 AM IST

ಕೊಪ್ಪಳ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನೆ ಮನೆಗೆ ತೆರಳಿದ್ದ ಆರೋಗ್ಯ ಸಿಬ್ಬಂದಿಗೆ ಅಜ್ಜಿಯೊಬ್ಬಳು ಕಿರಿಕ್ ಮಾಡಿದ್ದಾಳೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಅಡವಿಭಾವಿ ಗ್ರಾಮದಲ್ಲಿ ಅಜ್ಜಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿ ಆರೋಗ್ಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದಳು.

ಲಸಿಕೆ ಹಾಕಿಸಲು ಬಂದ ಸಿಬ್ಬಂದಿ ಜೊತೆ ಅಜ್ಜಿ ಟಾಕ್​ ಫೈಟ್​

‘ಯಪ್ಪ...ನಾನ್ ಹಿಂಗ ಸಾಯಲಿ, ನಾನಂತೂ ಸೂಜಿ ಮಾಡಿಸಿಕೊಳ್ಳಲ್ಲ, ಬ್ಯಾನಿ ತಿಂದು ಮಕ್ಕಳನ್ನು ಹಡದೀನಿ' ನಂಗ್ ಕಾಟ ಕೊಡಬ್ಯಾಡ ಹೋಗಪ್ಪಾ’. ಹಿಂಗಂತ ಮನೆ ಬಳಿ ಬಂದಿದ್ದ ಸಿಬ್ಬಂದಿ ಜೊತೆ ಮಾತಿಗಿಳಿದಿದ್ದಳು. ಆಕೆ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಅಜ್ಜಿ ಮಾತ್ರ ಯಾವುದಕ್ಕೂ ಬಗ್ಗದೆ ಸಿಬ್ಬಂದಿಗೆ ಬೈದು ಕಳುಹಿಸಿದ್ದಾಳೆ.

ಗ್ರಾಮದ ಹಲವು ಕಡೆಗಳಲ್ಲಿ ಇಂತಹ ಘಟನೆ ನಡೆಯುತ್ತಿದ್ದು, ಬರೀ ವೃದ್ಧರಲ್ಲದೆ ಪುರುಷರು, ಮಹಿಳೆಯರು ಸಹ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಪೇಚಿಗೆ ಸಿಲುಕುವಂತಾಗಿದೆ.

‘ತೊಂದರೆ ಕೊಡಬೇಡಿ ಹೋಗ್ರಿ’

ಕುಷ್ಟಗಿ ತಾಲೂಕಿನ ಜೂಲಕುಂಟಿ ಗ್ರಾಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಆನಂದ್ ಗೋಟೂರು ಆರೋಗ್ಯ ಸಿಬ್ಬಂದಿಯೊಂದಿಗೆ ಸದರಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಹಲವರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಇಲ್ಲೊಬ್ಬರು ಲಸಿಕೆಯಿಂದ ನನಗೇನು ಲಾಭವಿಲ್ಲ. ಲಸಿಕೆ ಹಾಕಿಸಿ ನಾನು ಸತ್ತರೆ ನನ್ನ ಹೆಂಡತಿ ಮಕ್ಕಳಿಗೆ ಪರಿಹಾರ ನೀಡುತ್ತೀರಾ..? ಎಂದೆಲ್ಲಾ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾನೆ. ಏನಾದರೂ ಸರಿ ನಾನು ಲಸಿಕೆ ಹಾಕಿಸಿಕೊಳ್ಳಲ್ಲ. ನನಗೆ ಸುಮ್ಮನೆ ತೊಂದರೆ ಕೊಡಬೇಡಿ ಎಂದು ವಾಗ್ವಾದ ನಡೆಸಿದ್ದಾನೆ.

ಲಸಿಕೆ ಪಡೆಯಲು ನಿರಾಕರಿಸುತ್ತಿರುವ ಹಳ್ಳಿಗರು

ಇತ್ತ ಶುಕ್ರವಾರ ನಡೆದ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ ಒಟ್ಟು 43,618 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ 13,150, ಗಂಗಾವತಿಯಲ್ಲಿ 12,525, ಕುಷ್ಟಗಿಯಲ್ಲಿ 9,564 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 8,379 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.

ಇದನ್ನೂ ಓದಿ: ಲಸಿಕೆ ಪಡೆಯಲು ವೃದ್ಧೆ ಹಿಂದೇಟು.. ಸಾರಾಯಿ ಆಸೆಗೆ ವ್ಯಾಕ್ಸಿನ್​ ಹಾಕಿಸಿಕೊಂಡ ವ್ಯಕ್ತಿ!

Last Updated : Sep 18, 2021, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.