ಗಂಗಾವತಿ: ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಇದೀಗ ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚುವರಿ ನೀರನ್ನು ನದಿ ಮೂಲಕ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಆನೆಗೊಂದಿ ಸಮೀಪದ ಐತಿಹಾಸಿಕ ಶ್ರೀಕೃಷ್ಣ ದೇವರಾಯನ ಸಮಾಧಿ ಬಹುತೇಕ ಜಲಾವೃತವಾಗಿದೆ.
![Drowned sri krishna devarayana grave in gangavathi](https://etvbharatimages.akamaized.net/etvbharat/prod-images/4825359_thum.jpg)
ಪರಿಣಾಮ ತಾಲೂಕಿನ ವಿದೇಶಿಗರ ಹಾಗೂ ಪ್ರವಾಸಿ ತಾಣವಾದ ವಿರೂಪಾಪುರಗಡ್ಡೆ ಜಲಾವೃತವಾಗಿದೆ. ಅಲ್ಲದೇ ಆನೆಗೊಂದಿ ಸಮೀಪದ ಐತಿಹಾಸಿಕ ಶ್ರೀಕೃಷ್ಣ ದೇವರಾಯನ ಸಮಾಧಿ ಬಹುತೇಕ ಜಲಾವೃತವಾಗಿದೆ. ವಿರೂಪಾಪುರಗಡ್ಡೆಯೂ ನಡುಗಡ್ಡೆಯಾಗಿದೆ.
ಗ್ರಾಮದ ಸುತ್ತಲೂ ನದಿಯಿಂದ ಜಲಾವೃತವಾಗಿದ್ದು. ಹೀಗಾಗಿ ಜನ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.ಆನೆಗೊಂದಿ ಸಮೀಪದ ನವ ಬೃಂದಾವನಕ್ಕೂ ಸಂಪರ್ಕ ಕಡಿತವಾಗಿದೆ.