ಕೊಪ್ಪಳ: ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರದಿಂದಾಗಿ ಕಂಗೆಟ್ಟಿರುವ ಸಾರಿಗೆ ಸಂಸ್ಥೆಯ ಕೊಪ್ಪಳದ ವಿಭಾಗೀಯ ಅಧಿಕಾರಿಗಳು, ಸಸ್ಪೆನ್ಷನ್ ರಿವೋಕ್ (ಅಮಾನತು ರದ್ದತಿ) ಅಸ್ತ್ರ ಪ್ರಯೋಗಿಸಿ ಒಂದೊಂದೇ ಬಸ್ಗಳನ್ನು ರಸ್ತೆಗಿಳಿಸುತ್ತಿದ್ದಾರೆ.
ವಿವಿಧ ಕಾರಣಗಳಿಗೆ ಸಸ್ಪೆಂಡ್ ಆಗಿರುವ ಚಾಲಕರು, ನಿರ್ವಾಹಕರು ಹಾಗೂ ಚಾಲಕ ಕಂ ನಿರ್ವಾಹಕರ ಅಮಾನತು ಹಿಂಪಡೆದು ಕರ್ತವ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಈ ಸಿಬ್ಬಂದಿ ಬಸ್ಗಳನ್ನು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ತಂದು ನಿಲ್ಲಿಸುತ್ತಿದ್ದಾರೆ.
ಈ ಮೂಲಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಮುಷ್ಕರನಿರತ ಸಿಬ್ಬಂದಿಗೆ ಶಾಕ್ ನೀಡುತ್ತಿದ್ದಾರೆ. ಬಸ್ಗಳು ನಿಲ್ದಾಣಕ್ಕೆ ಬರುತ್ತಿವೆಯಾದರೂ ಪ್ರಯಾಣಿಕರ ಕೊರತೆ ಕಾಣುತ್ತಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಶೇ.8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧ: ಸಿಎಂ