ಕುಷ್ಟಗಿ (ಕೊಪ್ಪಳ): ಕುಡಿಯುವ ನೀರು ಸಂರಕ್ಷಿಸಬೇಕಾದ ಪುರಸಭೆ, ತಾಲೂಕಾಡಳಿತ ಕಚೇರಿ ಮುಂದೆಯೇ ನೀರು ಪೋಲಾಗುತ್ತಿದ್ದರೂ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ತೋರಿದೆ.
ಇಲ್ಲಿ ಒಮ್ಮೊಮ್ಮೆ ನೀರಿನ ತೊಟ್ಟಿ ಭರ್ತಿಯಾಗಿ ಚರಂಡಿಗೆ ಹರಿದರೂ ಸ್ಥಳೀಯರು ನಳ ಬಂದ್ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಈ ರೀತಿಯಾಗಿ ನೀರು ವ್ಯರ್ಥವಾಗಿ ಚರಂಡಿಗೆ ಹರಿಯುವುದನ್ನು ನಿಯಂತ್ರಿಸಲು ಪುರಸಭೆ ಕ್ರಮ ವಹಿಸಬೇಕಿದೆ.