ETV Bharat / state

ಕೊಪ್ಪಳದಲ್ಲಿ ಸಾರ್ವಜನಿಕರಿಗೆ ತೀವ್ರ ತಲೆನೋವಾದ ಚರಂಡಿ ಕಾಮಗಾರಿ - koppala latest news

ನಗರದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಇದೀಗ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಚರಂಡಿಯಿಂದ ಎತ್ತಲಾದ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿಯೇ ಬಿಟ್ಟಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

koppala drainage work
ಕೊಪ್ಪಳ ಚರಂಡಿ ಕಾಮಗಾರಿ ಸಮಸ್ಯೆ
author img

By

Published : Dec 18, 2019, 5:11 PM IST

ಕೊಪ್ಪಳ : ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ರಸ್ತೆ ಬದಿ ನಡೆಯುತ್ತಿರುವ ಚರಂಡಿ ಕಾಮಗಾರಿ ಇದೀಗ ಹಲವು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ.

ಕೊಪ್ಪಳ: ಹಲವು ಸಮಸ್ಯೆಗಳಿಗೆ ಆಹ್ವಾನ ನೀಡಿದ ಚರಂಡಿ ಕಾಮಗಾರಿ

ಈ ಕಾಮಗಾರಿ ಕೇಂದ್ರೀಯ ಬಸ್ ನಿಲ್ದಾಣದ ಬಳಿ‌ ನಡೆಯುತ್ತಿದ್ದು, ಚರಂಡಿಯಿಂದ ಎತ್ತಲಾದ ಆ ತ್ಯಾಜ್ಯವನ್ನು ಬೇರೆಡೆ ಸಾಗಿಸದೆ ಅಲ್ಲಿಯೇ ಹಾಕಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಕಳೆದೆರಡು ದಿನಗಳಿಂದ ಈ ಭಾಗದ ಹೋಟೆಲ್​ಗಳೂ ಸಹ ಬಂದ್ ಆಗಿವೆ. ಇನ್ನೊಂದೆಡೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕರು ಚರಂಡಿಗಿಳಿದು ಕೆಲಸ ಮಾಡುತ್ತಿದ್ದಾರೆ. ಈ ಕಾಮಗಾರಿ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ, ಕಳಪೆ ಗುಣಮಟ್ಟದಲ್ಲಿ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು.

ಹಾಗಾಗಿ, ಈ ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ಕೂಡಲೇ ಬೇರೆಡೆಗೆ ಸಾಗಿಸುವ ಮೂಲಕ ಜನರ ಆರೋಗ್ಯವನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Intro:

Body:ಕೊಪ್ಪಳ:- ಜಿಲ್ಲಾ ಕೇಂದ್ರ ಕೊಪ್ಪಳ‌ ನಗರ ಗಬ್ಬು ನಾರುತ್ತಿದೆ. ಅದರಲ್ಲೂ ಈಗ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ಓಡಾಡೋದು ಅಂದ್ರೆ ಸಾಹಸವೇ ಸರಿ. ಏಕೆಂದರೆ ಚರಂಡಿಯ ತ್ಯಾಜ್ಯವನ್ನು ರಸ್ತೆಯಲ್ಲಿ ಹಾಕಿರೋದ್ರಿಂದ ದುರ್ವಾಸನೆ ಮೂಗಿಗೆ ರಾಚುತ್ತದೆ.‌ ಹೀಗಾಗಿ, ಇಲ್ಲಿ ಓಡಾಡುವ ಜನರು ಯಮಯಾತನೆ ಅನುಭವಿಸುತ್ತಿದ್ದಾರೆ.

ವಾ.ಓ.1:-ಹೌದು...., ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಕಾಮಗಾರಿ ಹೆಸರಿನಲ್ಲಿ ಒಂದಿಲ್ಲೊಂದು ಯಡವಟ್ಟುಗಳು, ಜನರಿಗೆ ಕಿರಿಕಿರಿಯಾಗಿಸುವ ಸಂದರ್ಭಗಳು ನಡೆಯುತ್ತಲೇ‌ ಇರುತ್ತವೆ. ಈಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63 ರ ರಸ್ತೆ ಬದಿ ನಡೆಯುತ್ತಿರುವ ಚರಂಡಿ ಕಾಮಗಾರಿ. ಚರಂಡಿ ಕಾಮಗಾರಿಯನ್ನು ಮಾಡಲು ಚರಂಡಿಯಲ್ಲಿರುವ ಹೊಲಸು ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯುತ್ತಿದ್ದಾರೆ. ಈಗ ಈ ಕಾಮಗಾರಿ ಕೇಂದ್ರೀಯ ಬಸ್ ನಿಲ್ದಾಣದ ಬಳಿ‌ ನಡೆಯುತ್ತಿದ್ದು ಚರಂಡಿಯ ಹೊಲಸನ್ನು ರಸ್ತೆಯಲ್ಲಿ ಹಾಕಿರುವುದರಿಂದ ಅಲ್ಲಿ ಓಡಾಡುವ ಜನರು ಯಮಯಾತನೆ ಅನುಭವಿಸುವಂತಾಗಿದೆ. ಚರಂಡಿಯಿಂದ ಎತ್ತಲಾದ ಆ ಹೊಲಸವನ್ನು ಕೂಡಲೇ ಅಲ್ಲಿಂದ ಬೇರೆಡೆಗೆ ಸಾಗಿಸಬೇಕು. ಆದರೆ ಅದನ್ನು ಬೇರೆಡೆ ಸಾಗಿಸದೆ ಅಲ್ಲಿಯೇ ಹಾಕಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಓಡಾಡೋದು ಅಂದ್ರೆ ದೊಡ್ಡ ಸಾಹಸವೇ ಸರಿ ಎನ್ನುವಂತಾಗಿದೆ. ಅಷ್ಟೊಂದು ಕೆಟ್ಟ ದುರ್ವಾಸನೆಯನ್ನು ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಬಸ್ ನಿಲ್ದಾಣವಿರುವ ಪ್ರದೇಶವಾಗಿರುವುದರಿಂದ ಇಲ್ಲಿ ಜನದಟ್ಟಣೆ ಸಾಕಷ್ಟು ಇದೆ. ಇದನ್ನು ಗಮನದಲ್ಲಿಟ್ಟುಕೊಳ್ಳದೆ ಹೊಲಸನ್ನು ರಸ್ತೆಯಲ್ಲಿ ಹಾಕಿರೋದಕ್ಕೆ ಜನರು ಹಿಡಿಹಿಡಿ ಶಾಪ ಹಾಕುತ್ತಿದ್ದಾರೆ.

ಬೈಟ್1:- ಮುನೀರ್ ಅಹ್ಮದ್ ಸಿದ್ದೀಕಿ, ಸ್ಥಳೀಯರು. (ಬಿಳಿ ಶರ್ಟ್ ಹಾಕಿದ್ದಾರೆ)

ವಾ.ಓ.2:- ಚರಂಡಿಯ ಹೊಲಸನ್ನು ರಸ್ತೆಗೆ ಹಾಕಿರುವುದರಿಂದ ವಾಸನೆ ತಡೆದುಕೊಳ್ಳಲಾಗುತ್ತಿಲ್ಲ. ಇದರಿಂದಾಗಿ ಕಳೆದೆರಡು ದಿನಗಳಿಂದ ಈ ಭಾಗದ ಹೊಟೆಲ್ ಗಳು ಸಹ ಬಂದ್ ಆಗಿವೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರದ್ದಂತೂ ಹೇಳತೀರದ ಯಾತನೆ. ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಚರಂಡಿಗಿಳಿದು ಕೆಲಸ ಮಾಡುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಚರಂಡಿ ಕಾಮಗಾರಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಕಳಪೆ ಗುಣಮಟ್ಟದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂಬ ಆರೋಪವೂ ಬಲವಾಗಿ ಕೇಳಿ ಬಂದಿದೆ.

ಬೈಟ್2:- ಶಿವರಾಜ ನುಗಡೋಣಿ, ಸ್ಥಳೀಯರು. (ಒಬ್ಬರೆ ನಿಂತು ಮಾತನಾಡಿದ್ದಾರೆ)

ವಾ.ಓ.3:- ಚರಂಡಿಯ ಆ ಹೊಲಸು ತ್ಯಾಜ್ಯವನ್ನು ರಸ್ತೆಯಲ್ಲಿಯೇ ಸುರಿದು ಬಿಟ್ಟಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯೆತೆಯೂ ಇದೆ. ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ಕೂಡಲೇ ಬೇರೆಡೆ ಸಾಗಿಸುವ ಮೂಲಕ ಜನರ ಆರೋಗ್ಯವನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಛಳಿ ಬಿಡಿಸಬೇಕಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.