ಗಂಗಾವತಿ: ಹನುಮ ಮಾಲಾಧಾರಿಗಳಿಗೆ ಮುಸ್ಲಿಂ ಬಾಂಧವರು ಸ್ವಯಂ ಪ್ರೇರಿತರಾಗಿ ಹಣ್ಣು ಹಂಪಲು ವಿತರಿಸುವ ಜತೆಗೆ ಪ್ರಸಾದ (ಊಟ) ಬಡಿಸುವ ಮೂಲಕ ರಾಮ್- ರಹೀಮ್ ಒಂದೇ ಎನ್ನುವ ಭಾವೈಕ್ಯತೆಯನ್ನು ಕಾರಟಗಿ ತಾಲೂಕಿನ ದೇವಿಕ್ಯಾಂಪಿನ ಜನರು ಸಾರಿದ್ದಾರೆ.
ಕಾರಟಗಿ ಪುರಸಭೆಯ 23ನೇ ವಾರ್ಡ್ ಶ್ರೀದೇವಿ ಬೀರೇಶ್ವರಿ ಸಮುದಾಯ ಭವನದಲ್ಲಿ ತಾತ್ಕಾಲಿಕ ಹನುಮ ಪೀಠ ಸ್ಥಾಪಿಸಲಾಗಿದ್ದು, ಹನುಮ ಮಾಲೆ ಧರಿಸಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ 45ಕ್ಕೂ ಹೆಚ್ಚು ಮಾಲಾಧಾರಿಗಳ ಪೂಜಾ ಕಾರ್ಯಕ್ಕೆ ಮುಸ್ಲಿಂ ಯುವಕರು ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರೂ ಹನುಮ ಮಂತ್ರ ಪಠಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮುಸ್ಲಿಂ ಯುವಕ ರಜಬ್, ಕಾರಟಗಿಯಿಂದ ಸ್ವಯಂ ಪ್ರೇರಿತರಾಗಿ ನಾವು ಒಟ್ಟು ಐವರು ಸೇರಿಕೊಂಡು ಹನುಮ ಮಾಲಾಧಾರಿಗಳಿಗಾಗಿಯೇ ಹಣ್ಣು ಹಂಪಲು ವಿತರಿಸಿ, ಬಳಿಕ ಮಾಲಾಧಾರಿಗಳಿಗೆ ಅಡುಗೆ ಬಡಿಸಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿ, ಧರ್ಮ ಭೇದವಿಲ್ಲ. ಇಲ್ಲಿ ನಾವೆಲ್ಲರೂ ಒಂದೇ, ರಾಮನೂ ಒಂದೇ, ರಹೀಮನೂ ಒಂದೇ ಎಂದು ರಜಾಬ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಕರಗ ಮಹೋತ್ಸವ ಮೆರವಣಿಗೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್