ಕುಷ್ಟಗಿ: ಲಾಕ್ಡೌನ್ ಹಿನ್ನೆಲೆ ನಿರಂತರವಾಗಿ ಶ್ರಮಿಸುತ್ತಿರುವ ಗೃಹರಕ್ಷಕ ದಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದಿನಸಿ ಕಿಟ್ಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಕ್ಷದ ಆದೇಶದ ಮೇರೆಗೆ ಗೃಹರಕ್ಷಕರು ಸೇರಿದಂತೆ ವಿವಿಧ ವರ್ಗದ ಸೇವಾನಿರತರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮಹಾಮಾರಿ ಕೊರೊನಾ ತೊಲಗಿ, ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಮಾಜಿ ಉಪಾಧ್ಯಕ್ಷ ವಿನಯ ಮೇಲಿನಮನಿ, ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರು, ಗೃಹರಕ್ಷಕ ಘಟಕಾಧಿಕಾರಿ ರವೀಂದ್ರ ಬಾಕಳೆ ಇದ್ದರು.