ಕುಷ್ಟಗಿ (ಕೊಪ್ಪಳ): ತಾಲೂಕಿನ ಮುಸ್ಲಿಂ ಕುಟುಂಬವೊಂದು ದೀಪಾವಳಿ ಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಎಲ್ಲರ ಗಮನ ಸೆಳೆದಿದೆ.
![dipavali-celebration-by-muslim-family-at-kustagi](https://etvbharatimages.akamaized.net/etvbharat/prod-images/kn-kst-02-15-muslim-deepavali-kac10028_15112020122945_1511f_1605423585_670.jpg)
ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಮುಸ್ಲಿಂ ಸಮುದಾಯದ ಕುಟುಂಬ ತಲೆತಲಾಂತರಗಳಿಂದ ತಮ್ಮ ಹಬ್ಬ ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ದೀಪಾವಳಿಯನ್ನೂ ಆಚರಿಸುತ್ತ ಬಂದಿದೆ.
![dipavali-celebration-by-muslim-family-at-kustagi](https://etvbharatimages.akamaized.net/etvbharat/prod-images/kn-kst-02-15-muslim-deepavali-kac10028_15112020122945_1511f_1605423585_26.jpg)
ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿರುವ ಹುಸೇನಸಾಬ್ ದೀಪಾವಳಿವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡಿ, ಲಕ್ಷ್ಮಿ ಕಂಬಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.