ಗಂಗಾವತಿ : ಬೆನ್ನಿಗೆ ಕಬ್ಬಿಣ ಸರಳಿನ ಕೊಕ್ಕೆ ಹಾಕಿಕೊಂಡು ಭಾರಿ ಗಾತ್ರದ ಕಲ್ಲು, ಕಾರು ಎಳೆದು ಭಕ್ತರು ದೇವಿ ಜಾತ್ರೆಯ ಅಂಗವಾಗಿ ಭಕ್ತಿ ಪ್ರದರ್ಶಿಸಿದ ಘಟನೆ ತಾಲೂಕಿನ ಬಂಡಿಬಸಪ್ಪ ಕ್ಯಾಂಪ್ನಲ್ಲಿ ನಡೆಯಿತು. ಬಂಡಿಬಸಪ್ಪ ಕ್ಯಾಂಪ್ನ (ಬಸವನದುರ್ಗ) ಗ್ರಾಮದೇವತೆ ಮಾರಿಯಮ್ಮ ದೇವಿಯ ಜಾತ್ರೆಯ ಅಂಗವಾಗಿ ಸಿಡಿ ಹಾಯುವ ಧಾರ್ಮಿಕ ಕಾರ್ಯಕ್ರಮ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ.
ಆದರೆ, ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಬಹುತೇಕ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಜಾತ್ರೆ ಆರಂಭವಾಗಿದ್ದು, ಸಿಡಿ ಹಾಯುವ ಸಂಪ್ರದಾಯ ಮುಂದುವರೆದಿದೆ.
ಓದಿ: ಬೆಲೆ ಏರಿಕೆ ಮರೆಮಾಚಲು ಬಿಜೆಪಿ ಸರ್ಕಾರದಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ, ಡಿಕೆಶಿ ವಾಗ್ದಾಳಿ