ETV Bharat / state

ರೆಡ್ಡಿಯ ಸಂಕಷ್ಟ ನಿವಾರಣೆಗೆ ಶಬರಿಮಲೆ ಅಯ್ಯಪ್ಪನ ಮೊರೆ ಹೋದ ಭಕ್ತ.. ರೆಡ್ಡಿ ಮೇಲಿನ ಪ್ರಕರಣಗಳು ಇತ್ಯರ್ಥಕ್ಕಾಗಿ ಹರಕೆ - ಹರಕೆ ಈಡೇರಿದರೆ ರೆಡ್ಡಿ ಅವರನ್ನೂ ನಿನ್ನ ಸನ್ನಿಧಾನಕ್ಕೆ

ಜನಾರ್ದನ ರೆಡ್ಡಿ ಸಂಕಷ್ಟ ನಿವಾರಣೆಗೆ ಶಬರಿಮಲೆ ಅಯ್ಯಪ್ಪನ ಮೊರೆ ಹೋದ ಭಕ್ತ - ರೆಡ್ಡಿಗೆ ಮತ್ತೆ ರಾಜಕೀಯವಾಗಿ ಪುನರ್ಜನ್ಮ ಸಿಗಬೇಕು-ರೆಡ್ಡಿ ಗಂಗಾವತಿ ಶಾಸಕರಾಗಿ ಆಯ್ಕೆಯಾಗಬೇಕು ಎಂಬ ಹರಕೆಗೆ ಬೇಡಿಕೆಯಿಟ್ಟ ಅಭಿಮಾನಿ ಮಂಜುನಾಥ.

Manjunatha  devotee went to Ayyappa
ಅಯ್ಯಪ್ಪನ ಮೊರೆ ಹೋದ ಭಕ್ತ ಮಂಜುನಾಥ
author img

By

Published : Jan 14, 2023, 8:07 PM IST

ರೆಡ್ಡಿಯ ಸಂಕಷ್ಟ ನಿವಾರಣೆಗೆ ಶಬರಿಮಲೆ ಅಯ್ಯಪ್ಪನ ಮೊರೆ ಹೋದ ಭಕ್ತ

ಗಂಗಾವತಿ(ಕೊಪ್ಪಳ):ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಮಾಜಿ ಸಚಿವ ಹಾಗೂ ಗಣಿಧಣಿ ಜಿ ಜನಾರ್ದನ ರೆಡ್ಡಿ ಅವರ ಮೇಲಿರುವ ಎಲ್ಲ ಪ್ರಕರಣಗಳು ಇತ್ಯರ್ಥವಾಗಲಿ ಎಂದು ಭಕ್ತನೊಬ್ಬ ಹರಕೆ ಹೊತ್ತು ಶಬರಿಮಲೆ ಅಯ್ಯಪ್ಪನ ಮೊರೆ ಹೋಗಿದ್ದಾರೆ. ಗಂಗಾವತಿ ನಗರದಲ್ಲಿ ಖಾನಾವಳಿ ನಡೆಸುತ್ತಿರುವ ಮಂಜುನಾಥ ಎಂಬ ಯುವಕ ಅಯ್ಯಪ್ಪನ ಮಾಲೆ ಧರಿಸಿ ವ್ರತಾಚರಣೆ ಕೈಗೊಂಡಿದ್ದಾರೆ. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ರೆಡ್ಡಿಯ ಭಾವಚಿತ್ರ ಹೊತ್ತುಕೊಂಡು ಶಬರಿಮಲೈನ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಹರಕೆ ಹೊತ್ತಿದ್ದಾರೆ.

ಜನಾರ್ದನರೆಡ್ಡಿ ಅಪ್ಪಟ ಅಭಿಮಾನಿ: ಹೋಟೆಲ್​ ವ್ಯಾಪಾರದ ಮೂಲಕ ಉಪಜೀವನ ಕಂಡುಕೊಂಡಿರುವ ಮಂಜುನಾಥ, ಜನಾರ್ದನರೆಡ್ಡಿ ಅಪ್ಪಟ ಅಭಿಮಾನಿ. ಒಂದೂವರೆ ದಶಕದಿಂದಲೂ ರೆಡ್ಡಿಯನ್ನು ಅಭಿಮಾನಿಯಾಗಿರುವ ಮಂಜುನಾಥ, ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದರಿಂದ ಇನ್ನಷ್ಟು ಸಂತಸಪಟ್ಟಿದ್ದಾರೆ.ಇದೀಗ ರೆಡ್ಡಿ ಮೇಲಿರುವ ಎಲ್ಲ ಪ್ರಕರಣಗಳು ಇತ್ಯರ್ಥವಾಗಬೇಕು ಎಂದು ಹರಕೆ ಹೊತ್ತು, ರೆಡ್ಡಿಯ ಭಾವಚಿತ್ರದೊಂದಿಗೆ ಶಬರಿಮಲೆಗೆ ತೆರಳಿದ್ದಾರೆ.

ರೆಡ್ಡಿಗೆ ಮತ್ತೆ ರಾಜಕೀಯವಾಗಿ ಪುನರ್ಜನ್ಮ ಸಿಗಬೇಕು, ಅವರ ಮೇಲಿರುವ ಎಲ್ಲಾ ಪ್ರಕರಣಗಳು ಇತ್ಯರ್ಥವಾಗಬೇಕು. ಕೇಂದ್ರದ ತನಿಖಾ ತಂಡಗಳು ವಶಕ್ಕೆ ಪಡೆದಿರುವ ಅವರ ಆಸ್ತಿ, ಹಣ ಎಲ್ಲವೂ ರೆಡ್ಡಿಗೆ ಮರಳಿ ಸಿಗಬೇಕು. ರೆಡ್ಡಿ ಗಂಗಾವತಿಯ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಹರಕೆ ಹೊತ್ತಿದ್ದಾನೆ.

ಗಂಗಾವತಿಯನ್ನು ಮಾದರಿ ಕ್ಷೇತ್ರ:ರೆಡ್ಡಿ ಕೇವಲ ಶಾಸಕರಾಗಿ ಮಾತ್ರವಲ್ಲ, ಗಂಗಾವತಿಯನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಬೇಕು, ರಾಜಕೀಯ ನೆಲೆ ಕಳೆದುಕೊಂಡಿರುವ ಎಲ್ಲ ಸ್ಥಾನಮಾನ ಸಿಕ್ಕು ಮತ್ತೆ ವಿಜೃಂಭಿಸಬೇಕು. ಎಲ್ಲ ಹರಕೆ ಈಡೇರಿದರೆ ರೆಡ್ಡಿ ಅವರನ್ನೂ ನಿನ್ನ ಸನ್ನಿಧಾನಕ್ಕೆ ಕರೆ ತರುವೆ ಎಂದು ಮಂಜುನಾಥ ಬೇಡಿಕೆ ಸಲ್ಲಿಸಿದ್ದಾನೆ. ಗಂಗಾವತಿಯಿಂದ ಶಬರಿಮಲೈವೆರೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿಯ ಭಾವಚಿತ್ರವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಮಂಜುನಾಥ, ಇರುಮುಡಿ ಹೊತ್ತುಕೊಂಡು ಪಂಪಾನದಿಯಿಂದ ಅಯ್ಯಪ್ಪ ಸ್ವಾಮಿ ಗರ್ಭಗುಡಿ ವರೆಗೂ ರೆಡ್ಡಿಯ ಚಿತ್ರವನ್ನು ಮಂಜುನಾಥ ಕೊರಳಲ್ಲಿ ಧರಿಸಿಕೊಂಡು ಹೋಗಿದ್ದರು.

ಗಂಗಾವತಿ ಅಭಿವೃದ್ಧಿಗೆ ಸುವರ್ಣ ಅವಕಾಶ: ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದಾಗ ಬಳ್ಳಾರಿಯಲ್ಲಿ ಮಾಡಿದ್ದ ಅಭಿವೃದ್ಧಿ, ಜನರಿಗೆ ಕಲ್ಪಿಸಿದ್ದ ಮೂಲಸೌಕರ್ಯಗಳನ್ನು ಗಮನಿಸಿ ನಾನು ಅವರ ಅಭಿಮಾನಿಯಾಗಿದ್ದೇನೆ ಎಂದು ಮಂಜುನಾಥ ಹೇಳಿದ್ದು, ರೆಡ್ಡಿ ಅವರು ಗಂಗಾವತಿಗೆ ಬಂದಿದ್ದಾರೆ. ಇಲ್ಲಿನ ಜನ ಒಂದು ಬಾರಿ ಜನಾರ್ದನ ರೆಡ್ಡಿ ಅವರಿಗೆ ಅವಕಾಶ ನೀಡಿದರೆ, ಅದು ಗಂಗಾವತಿಯ ಅಭಿವೃದ್ಧಿಗೆಯ ಪಾಲಿಗೆ ಸುವರ್ಣ ಅವಕಾಶ ನೀಡಿದಂತಾಗಲಿದೆ. ಮಾದರಿ ಕ್ಷೇತ್ರವನ್ನಾಗಿ ಮಾರ್ಪಡಿಸಲು ರೆಡ್ಡಿ ಯತ್ನಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ: ಇದೀಗ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿಯಂಥ ಶ್ರೀಮಂತ ರಾಜಕಾರಣಿಯ ಶ್ರೇಯಸ್ಸು ಕೋರಿ ಅಭಿಮಾನಿ ಮಂಜುನಾಥ ಎಂಬುವವರು ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ರೆಡ್ಡಿ ಚಿತ್ರ ಹಿಡಿದು ಹರಕೆ ಹೊತ್ತು ಗಮನ ಸೆಳೆದಿದ್ದಾರೆ. ರಾಜಕೀಯ ವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಘೋಷಣೆ ಮಾಡಿದ್ದಲ್ಲದೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವುದು ಗಮನಾರ್ಹ.
ಇದನ್ನೂಓದಿ:ಮಕರ ಸಂಕ್ರಾಂತಿಯಂದು ಪವಿತ್ರ ಗಂಗಾ ನದಿಯಲ್ಲಿ ಮಿಂದೆದ್ದ ಭಕ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.