ETV Bharat / state

ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡುವ ಯತ್ನಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮತ್ನಾಳ ಹೊರವಲಯದ ಕಂಟಿ ಕೆಂಚಮ್ಮದೇವಿಗೆ ಪೂಜಿಸುವ ನೆಪದಲ್ಲಿ ಯುವತಿಯೋರ್ವಳನ್ನು ದೇವದಾಸಿ ಪದ್ಧತಿಗೆ ಬಿಡುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಸದ್ಯ ಇದನ್ನು ತಡೆಯುವಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದ ಅಧಿಕಾರಿಗಳ‌‌‌ ತಂಡ ಯಶಸ್ವಿಯಾಗಿದೆ.

Devadasi case of kushtagi
Devadasi case of kushtagi
author img

By

Published : Aug 4, 2020, 7:42 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೋರ್ವಳನ್ನು ದೇವದಾಸಿ ಪದ್ಧತಿಗೆ ದೂಡಲು ಯತ್ನಿಸುತ್ತಿರುವುದನ್ನು ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದ ಅಧಿಕಾರಿಗಳ‌‌‌ ತಂಡ ತಡೆದಿದೆ.

ತಾವರಗೇರಾ ಮೂಲದ ಯುವತಿಯ ತಲೆಗೆ ಅವರ ಹೆತ್ತವರು ಸೇರಿದಂತೆ ಇತರರು ಮೌಢ್ಯದ ವಿಚಾರಗಳನ್ನು ತುಂಬಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮತ್ನಾಳ ಹೊರವಲಯದ ಕಂಟಿ ಕೆಂಚಮ್ಮದೇವಿಗೆ ಪೂಜಿಸುವ ನೆಪದಲ್ಲಿ ಯುವತಿಯನ್ನು ದೇವರಿಗೆ ಬಿಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು.

ಈ ಅನಿಷ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಸೋಮವಾರ ರಾತ್ರಿ ತಹಶೀಲ್ದಾರ್ ಎಂ. ಸಿದ್ದೇಶ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಹಾಗೂ ಮುದಗಲ್ ಎಎಸ್ ಐ ಅವರ ತಂಡ ರಾಮತ್ನಾಳ ದೇವಿ ಗುಡಿಗೆ ದೌಡಾಯಿಸಿ ಮೌಢ್ಯತೆ ಬ್ರೇಕ್​ ಹಾಕಿ, ಯುವತಿಯನ್ನು ರಕ್ಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ್ ಅವರು ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಯುವತಿಯ ತಂದೆ-ತಾಯಿ, ಕರಿಯಪ್ಪ, ಯಮನವ್ವ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಹಾಗೂ ಅನಿಷ್ಟ ಪದ್ಧತಿಯನ್ನು ನಿಯಂತ್ರಿಸಲು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಸದ್ಯ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ಕೂಡಾ ಈ ಪದ್ಧತಿ ಜೀವಂತವಾಗಿರುವುದಕ್ಕೆ ವಿಮುಕ್ತ ದೇವದಾಸಿ ಸಂಘಟನೆಯ ಸಂಚಾಲಕ ಚಂದಾಲಿಂಗಪ್ಪ ಕಲಕಬಂಡಿ, ಹುಸೇನಪ್ಪ ಮುದೇನೂರು, ಚಂದ್ರು ಕುಂಬಾರ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ತಡೆದ ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.