ಗಂಗಾವತಿ(ಕೊಪ್ಪಳ): ತಾಲೂಕಿನ ಆನೆಗೊಂದಿ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಫಸಲು ನೆಲಕ್ಕುರುಳಿದೆ.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೂ ಸುರಿದ ನಿರಂತರ ಮಳೆಯಿಂದಾಗಿ ಎಡದಂಡೆ ನಾಲೆಯ ಸಮೀಪ ಬೋರ್ವೆಲ್ ಮೂಲಕ ಬೆಳೆಯಲಾಗಿದ್ದ ನೂರಾರು ಎಕರೆ ಭತ್ತದ ಫಸಲು ನೆಲಕ್ಕುರುಳಿದೆ. ಪರಿಣಾಮ ಈಗಷ್ಟೇ ತೆನೆ ಕಟ್ಟುತ್ತಿದ್ದ ಬೆಳೆಯಲ್ಲಿ ಇಳುವರಿ ಕುಂಟಿತವಾಗುವ ಆತಂಕ ಎದುರಾಗಿದೆ.
ಸ್ಥಳಕ್ಕಾಮಿಸಿದ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ರೈತರಿಂದ ಬೆಳೆಹಾನಿಯ ಮಾಹಿತಿ ಸಂಗ್ರಹಿಸಿದ್ದಾರೆ.