ETV Bharat / state

ಸಾಮೂಹಿಕ ವಿವಾಹದಲ್ಲಿ ದಲಿತ ಜೋಡಿಗೆ ಪ್ರತ್ಯೇಕ ವಿವಾಹ ವಾಗಲು ಸೂಚನೆ ಆರೋಪ: ಕ್ರಮಕ್ಕೆ ಆಗ್ರಹ - Demand to take action on casteist in Koppal

ತಿಗರಿ ಗ್ರಾಮದಲ್ಲಿ ದಲಿತರ ಹಾಗೂ ಸವರ್ಣಿಯರ ನಡುವೆ ಉಂಟಾಗಿರುವ ಮನಸ್ತಾಪದ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ಅಧಿಕಾರಿಗಳು ನಡೆಸಿದ ಶಾಂತಿಸಭೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಘಟನೆಗೆ ಮೂಲಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾತಿ ನಿರ್ಮೂಲನಾ ಚಳವಳಿ ವೇದಿಕೆಯ ಮುಖಂಡ ಹನುಮೇಶ ಮ್ಯಾಗಳಮನಿ ಆಗ್ರಹಿಸಿದರು.

ಜಾತಿಬೇಧ ತೋರಿದವರ ಮೇಲೆ ಶೀಘ್ರ ಕ್ರಮಕ್ಕೆ ಆಗ್ರಹ
author img

By

Published : Aug 30, 2019, 5:20 PM IST

ಕೊಪ್ಪಳ: ಅಸ್ಪೃಶ್ಯತೆ ಆಚರಣೆಯಿಂದಾಗಿ ತಾಲೂಕಿನ ತಿಗರಿ ಗ್ರಾಮದಲ್ಲಿ ದಲಿತರ ಹಾಗೂ ಸವರ್ಣಿಯರ ನಡುವೆ ಉಂಟಾಗಿರುವ ಮನಸ್ತಾಪದ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ಅಧಿಕಾರಿಗಳು ನಡೆಸಿದ ಶಾಂತಿಸಭೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಘಟನೆಗೆ ಮೂಲಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾತಿ ನಿರ್ಮೂಲನಾ ಚಳವಳಿ ವೇದಿಕೆಯ ಮುಖಂಡ ಹನುಮೇಶ ಮ್ಯಾಗಳಮನಿ ಆಗ್ರಹಿಸಿದರು.

ಕಾನೂನು ಕ್ರಮಕ್ಕೆ ಆಗ್ರಹ

ತಿಗರಿ ಗ್ರಾಮದ ದಲಿತ ಸಮುದಾಯದ ಯುವಕರೊಂದಿಗೆ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹನುಮೇಶ ಮ್ಯಾಗಳಮನಿ, ಈ ಪ್ರಕರಣದಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಫಕಿರೇಶ್ವರ ಜಾತ್ರೆಯ ಅಂಗವಾಗಿ ಇತ್ತಿಚೆಗೆ ಗ್ರಾಮದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದರು. ಅದರಲ್ಲಿ ದಲಿತ ಸಮುದಾಯದ 4 ಜೋಡಿಗಳಿಗೆ ಪ್ರತ್ಯೇಕವಾಗಿ ಮದುವೆ ಮಾಡಿಸಲು ಮುಂದಾದರು. ಎಲ್ಲರಂತೆ ಮದುವೆಯ ಶುಲ್ಕವನ್ನು ದಲಿತ ಜೋಡಿಗಳಿಂದಲೂ ಪಡೆದಿದ್ದಾರೆ. ಆದರೂ ಅವರಿಗೆ ಬೇರೆ ಸ್ಥಳದಲ್ಲಿ ಮದುವೆ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನು ಅಲ್ಲಿನ ದಲಿತ ಯುವಕರು ಪ್ರಶ್ನಿಸಿದ್ದಕ್ಕೆ ಸವರ್ಣಿಯರು ಬಹಿಷ್ಕಾರ ಹಾಕಿದವರಂತೆ ವರ್ತಿಸಿದರು. ಘಟನೆ ಹಿನ್ನೆಲೆ ಶಾಸಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ ಶಾಂತಿಸಭೆ ನಡೆಸಿದರು. ಆದರೆ, ಅದು ಪ್ರಯೋಜವಾಗದಂತಾಗಿದೆ ಎಂದರು.

ಗ್ರಾಮದಲ್ಲಿ ದಲಿತರ ಸ್ಥಿತಿ ಬದಲಾಗಿಲ್ಲ. ಚಹಾ ಅಂಗಡಿಯಲ್ಲಿ ದಲಿತರಿಗೆ ನೀರು ಎತ್ತಿ ಹಾಕಿದವರ ಮೇಲೆ ಮಾತ್ರ ಈಗ ಪ್ರಕರಣ ದಾಖಲಿಸಿದ್ದಾರೆ. ಆದರೆ, ಘಟನೆಗೆ ಮೂಲ ಕಾರಣವಾದ ಸಾಮೂಹಿಕ ವಿವಾಹ ಆಯೋಜನೆ ಮಾಡಿದ ಮುಖಂಡರ ಮೇಲೆ ಕೇಸ್ ದಾಖಲಿಸಿಲ್ಲ. ಇದು ಅಧಿಕಾರಿಗಳು ಮಾಡಿರುವ ಕರ್ತವ್ಯ ಲೋಪ. ಕೂಡಲೇ ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದ ಮುಖಂಡರ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಹನುಮೇಶ ಮ್ಯಾಗಳಮನಿ ಎಚ್ಚರಿಕೆ ನೀಡಿದರು.

Intro:

Body:ಕೊಪ್ಪಳ:-ಅಸ್ಪೃಶ್ಯತೆ ಆಚರಣೆಯಿಂದಾಗಿ ತಾಲೂಕಿನ ತಿಗರಿ ಗ್ರಾಮದಲ್ಲಿ ದಲಿತರ ಹಾಗೂ ಸವರ್ಣಿಯರ ನಡುವೆ ಉಂಟಾಗಿರುವ ಮನಸ್ತಾಪದ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ಅಧಿಕಾರಿಗಳು ನಡೆಸಿದ ಶಾಂತಿಸಭೆ ಕೇವಲ ನೆಪಮಾತ್ರಕ್ಕೆ ಎಂಬಂತಾಗಿದೆ. ಘಟನೆಗೆ ಮೂಲಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾತಿ ನಿರ್ಮೂಲನಾ ಚಳವಳಿ ವೇದಿಕೆಯ ಮುಖಂಡ ಹನುಮೇಶ ಮ್ಯಾಗಳಮನಿ ಆಗ್ರಹಿಸಿದ್ದಾರೆ. ತಿಗರಿ ಗ್ರಾಮದ ದಲಿತ ಸಮುದಾಯದ ಯುವಕರೊಂದಿಗೆ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿದರು. ಫಕೀರೇಶ್ವರ ಜಾತ್ರೆಯ ಅಂಗವಾಗಿ ಇತ್ತೀಚಿಗೆ ಗ್ರಾಮದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದರು. ಅದರಲ್ಲಿ ದಲಿತ ಸಮುದಾಯದ 4 ಜೋಡಿಗಳಿಗೆ ಪ್ರತ್ಯೇಕವಾಗಿ ಮದುವೆ ಮಾಡಿಸಲು ಮುಂದಾದರು. ಎಲ್ಲರಂತೆ ಮದುವೆಯ ಶುಲ್ಕವನ್ನು ಆ ದಲಿತ ಜೋಡಿಗಳಿಂದಲೂ ಪಡೆದಿದ್ದಾರೆ. ಆದರೂ ಅವರಿಗೆ ಬೇರೆ ಸ್ಥಳದಲ್ಲಿ ಮದುವೆ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನು ಅಲ್ಲಿನ ದಲಿತ ಯುವಕರು ಪ್ರಶ್ನೆ‌ ಮಾಡಿದರು. ಅದಕ್ಕೆ ಸವರ್ಣಿಯರು ನಮ್ಮನ್ನು ಒಂದು ರೀತಿಯಲ್ಲಿ ಬಹಿಷ್ಕಾರ ಹಾಕಿದವರಂತೆ ವರ್ತಿಸಿದರು. ಘಟನೆ ಹಿನ್ನೆಲೆಯಲ್ಲಿ ಶಾಸಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ ಶಾಂತಿಸಭೆ ನಡೆಸಿದರು. ಆದರೆ, ಅದು ಪ್ರಯೋಜವಾಗದಂತಾಗಿದೆ. ಗ್ರಾಮದಲ್ಲಿ ದಲಿತರ ಸ್ಥಿತಿ ಬದಲಾಗಿಲ್ಲ. ಚಹದ ಅಂಗಡಿಯಲ್ಲಿ ದಲಿತರಿಗೆ ನೀರು ಎತ್ತಿ ಹಾಕಿದವರ ಮೇಲೆ ಮಾತ್ರ ಈಗ ಪ್ರಕರಣ ದಾಖಲಿಸಿದ್ದಾರೆ. ಆದರೆ, ಘಟನೆಗೆ ಮೂಲ ಕಾರಣವಾದ ಸಾಮೂಹಿಕ ವಿವಾಹ ಆಯೋಜನೆ ಮಾಡಿದ ಮುಖಂಡರ ಮೇಲೆ ಕೇಸ್ ದಾಖಲಿಸಿಲ್ಲ. ಇದು ಅಧಿಕಾರಿಗಳು ಮಾಡಿರುವ ಕರ್ತವ್ಯ ಲೋಪ. ಕೂಡಲೇ ಸಾಮೂಹೊಕ ವಿವಾಹ ಆಯೋಜನೆ ಮಾಡಿದ್ದ ಆ ಮುಖಂಡರ ಮೇಲೆ ಕೇಸ್ ದಾಖಲಿಸಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡೋದಾಗಿ ಹನುಮೇಶ ಮ್ಯಾಗಳಮನಿ ಹೇಳಿದರು.

ಬೈಟ್1:- ಹನುಮೇಶ ಮ್ಯಾಗಳಮನಿ, ಜಾತಿ ನಿರ್ಮೂಲನಾ ಚಳವಳಿ ವೇದಿಕೆ ಮುಖಂಡ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.