ಗಂಗಾವತಿ (ಕೊಪ್ಪಳ): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ದೇಶದೆಲ್ಲೆಡೆ ಈಗ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದೆ. ಈ ಹಿನ್ನೆಲೆ ಎಲ್ಲರೂ ನಿಧಿ ಸಮರ್ಪಿಸುವಂತೆ ಅಂಜನಾದ್ರಿಯ ರಮಾನಂದ ಸಂಪ್ರದಾಯ ಅಂಜನಿ ಪರ್ವತ ಹನುಮಾನ್ ವಿಕಾಸ್ ಟ್ರಸ್ಟ್ನ ಪೀಠಾಧಿಪತಿ ವಿದ್ಯಾದಾಸ ಬಾಬಾ ಮನವಿ ಮಾಡಿದ್ದಾರೆ.
ಅಂಜನಾದ್ರಿ ಪರ್ವತದ ಹನುಮ ಮಂದಿರದಲ್ಲಿ 1 ಕೋಟಿ ರಾಮನಾಮ ಜಪ ಅಭಿಯಾನ ಆರಂಭವಾಗಿದೆ. ಈ ಹಿನ್ನೆಲೆ ಅಯೋಧ್ಯೆಯ ರಾಮನಿಗೆ ಜನ ನಿಧಿ ಸಮರ್ಪಣೆ ಮಾಡಿ. ಆದರೆ ರಾಮನಾಮ ಜಪವನ್ನು ಹನುಮನಿಗೆ ತಲುಪಿಸಿ ಎಂದು ಮನವಿ ಮಾಡಿದರು.
ಯಾರು ದೇಗುಲಕ್ಕೆ ಬಂದು ರಾಮನಾಮ ಜಪದ ಪುಸ್ತಕ, ಪೇಪರ್ ನೀಡಲು ಸಾಧ್ಯವಾಗುವದಿಲ್ಲವೋ ಅವರು ಅಂಚೆ ಮೂಲಕ ಕಳಿಸಬಹುದು, ಬಿಳಿ ಹಾಳೆಯಲ್ಲಿ ಬರೆದು ನನಗೆ ವಾಟ್ಸಾಪ್ ಮೂಲಕವು ಕಳುಹಿಸಬಹುದು ಎಂದಿದ್ದಾರೆ.
ಹೀಗೆ ಭಕ್ತರಿಂದ ಸಂಗ್ರಹಿಸಲಾದ ರಾಮನಾಮ ಜಪವನ್ನು ದೇವಾಲಯದಲ್ಲಿ ಭದ್ರಪಡಿಸಲಾಗುವುದು. ಯಾರಿಗಾದರೂ ಅಗತ್ಯ ನೆರವು ಬೇಕಿದ್ದರೆ ನೇರವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ...