ಗಂಗಾವತಿ: ಭಾನುವಾರ ಇಡೀ ರಾಜ್ಯದಾದ್ಯಂತ ಸರ್ಕಾರ ಕರ್ಫೂ ಜಾರಿ ಮಾಡಿದ ಹಿನ್ನೆಲೆ, ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಅಗ್ನಿ ಶಾಮಕ ದಳದ ಸಿಬ್ಬಂದಿ ನೆರವಿನಿಂದ ಬಸ್ ನಿಲ್ದಾಣದ ಮೇಲ್ಛಾವಣಿಗೆ ವಾಟರ್ಗನ್ ಮೂಲಕ ನೀರು ಹಾಯಿಸಿ ಧೂಳು, ಕಸ, ಕಡ್ಡಿ ಹಾಗೂ ಕಟ್ಟಿದ ಜೇಡರಬಲೆಯನ್ನು ತೆಗೆಯಲಾಯಿತು. ನಿಲ್ದಾಣದ ನೆಲಮಟ್ಟದಿಂದ ಮೇಲ್ಛಾವಣಿ ಸುಮಾರು 40 ಅಡಿ ಎತ್ತರದಲ್ಲಿದೆ.

ಹೀಗಾಗಿ ಸುಲಭವಾಗಿ ಸಿಬ್ಬಂದಿ ಅಲ್ಲಿಗೆ ತಲುಪಲಾಗದಿದ್ದರಿಂದ ಹಾಗೂ ಮೇಲ್ಛಾವಣಿ ಸ್ವಚ್ಛತೆಗೆ ಸಿಬ್ಬಂದಿಯಿಂದ ಸಾಧ್ಯವಾಗದ್ದರಿಂದ ಪ್ರತಿಬಾರಿ ಸ್ವಚ್ಛತೆಗೆ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಬೇಕಾಗಿರುವುದು ಅನಿವಾರ್ಯವಾಗಿದೆ. ಇಂದು ಕರ್ಫೂವಿದ್ದ ಕಾರಣ ಈ ದಿನವನ್ನು ವ್ಯರ್ಥ ಮಾಡಬಾರದೆಂದು ಸಿಬ್ಬಂದಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು.