ಕುಷ್ಟಗಿ: ನಿಷೇಧದ ಹೊರತಾಗಿಯೂ ದೋಟಿಹಾಳ ಗ್ರಾಮದಲ್ಲಿ ಗೋಹತ್ಯೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೋಟಿಹಾಳ ಗ್ರಾಮದವರಾದ ಪರಶುರಾಮ್ ಕರಿಯಪ್ಪ ಪೂಜಾರ, ಸಣ್ಣಪ್ಪ ಕರಿಯಪ್ಪ ಅಲಿಯಾಸ ಗಿಡ್ಡಪ್ಪ ಹೊಸಮನಿ, ಹನೀಪ್ ರಸೂಲ್ ಸಾಬ ಕಾಟೇವಾಡೆ, ಗುಲಾಮ್ ರಸೂಲ್ ದಸ್ತಗೀರಸಾಬ್ ಕಾಟೆವಾಡೆ ಎಂಬ ಆರೋಪಿಗಳ ವಿರುದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಹಿನ್ನೆಲೆ: ಜುಲೈ10 ರಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದೋಟಿಹಾಳ ಗ್ರಾಮದಿಂದ ಮೂರು ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಗೋಹತ್ಯೆ ನಡೆದ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ನಾಲ್ವರು ಮಾತ್ರ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದರು. ಆರೋಪಿಗಳಿಂದ 40 ಕೆ.ಜಿ.ಗೋಮಾಂಸ ವಶಪಡಿಸಿಕೊಳ್ಳಲಾಗಿತ್ತು.