ಕೊಪ್ಪಳ: ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಕೋವಿಡ್ ಸೋಂಕಿತ ಜಿಲ್ಲಾಸ್ಪತ್ರೆಯ ಮುಂದೆ ಕೊನೆಯುಸಿರೆಳೆದ ಘಟನೆ ನಡೆದಿದೆ.
ಕೊಪ್ಪಳ ತಾಲೂಕು ಹಿರೇಬೊಮ್ಮನಾಳ ಗ್ರಾಮದ ಹೇಮಣ್ಣ ಹಡಪದ (50) ಮೃತ ವ್ಯಕ್ತಿ. ಇವರಿಗೆ ವಾರದ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿ ಹೇಮಣ್ಣಗೆ, ಬುಧವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಹಾಗಾಗಿ, ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ವೃದ್ಧೆ ಸಾವು ಆರೋಪ
ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದ ಕಾರಣ ಸೋಂಕಿತನನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಆಕ್ಸಿಜನ್ ನೀಡಿ ಎಂದು ಕೇಳಿಕೊಂಡರೂ ಕೇಳಿಸಿಕೊಂಡಿಲ್ಲ. ಕೊನೆಗೆ ಆಸ್ಪತ್ರೆ ಮುಂದೆಯೇ ಹೇಮಣ್ಣ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.