ಕೊಪ್ಪಳ: ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನ ಒಂದೆಡೆ ಸೇರಬಾರದೆಂಬ ಆದೇಶವಿದೆ. ಹೀಗಾಗಿ ನವ ಜೋಡಿಯೊಂದು ಕೇವಲ ಹತ್ತು ಜನರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಜಿಲ್ಲೆಯ ಕಾರಟಗಿ ತಾಲೂಕು ನವಲಿ ಗ್ರಾಮದಲ್ಲಿ ಈ ಸರಳ ವಿವಾಹ ನೆರವೇರಿದೆ. ಮಹಾದೇವ ಹಾಗೂ ಶಿವಲೀಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.
ಮೊದಲೇ ನಿಗದಿಪಡಿಸಿದ ದಿನಾಂಕದಂತೆ ವರನ ಮನೆಯಲ್ಲಿ ಕೇವಲ 10 ಜನರ ಸಮ್ಮುಖದಲ್ಲಿ ವಿವಾಹ ಸಮಾರಂಭ ಸರಳವಾಗಿ ಜರುಗಿತು.