ಕೊಪ್ಪಳ: ಕೊರೊನಾ ಶಂಕಿತ ಮೂರನೇ ವ್ಯಕ್ತಿಯ ಗಂಟಲು ದ್ರವ ಮಾದರಿಯ ವರದಿ ನೆಗಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆಯ ಸಂಜೆಯವರೆಗಿನ ಮಾಹಿತಿ ಪ್ರಕಾರ, ಒಟ್ಟು 79 ಜನರ ಮೇಲೆ ನಿಗಾ ಇಡಲಾಗಿದೆ. ಈವರೆಗೆ ಒಟ್ಟು ಮೂವರು ಶಂಕಿತರ ಗಂಟಲು ದ್ರವವನ್ನು ಲ್ಯಾಬ್ಗೆ ಕಳಿಸಲಾಗಿತ್ತು. ಈಗಾಗಲೇ ಇಬ್ಬರ ವರದಿಗಳು ನೆಗಟಿವ್ ಬಂದಿದ್ದವು. ಇನ್ನೊಬ್ಬ ವ್ಯಕ್ತಿಯ ವರದಿಗಾಗಿ ಕಾಯಲಾಗುತ್ತಿತ್ತು. ಇಂದು ಮೂರನೇ ವ್ಯಕ್ತಿಯ ಲ್ಯಾಬ್ ವರದಿಯು ಸಹ ನೆಗೆಟಿವ್ ಎಂದು ಬಂದಿದೆ.
ಶಂಕಿತ ಮೂವರ ವರದಿಯೂ ನೆಗಟಿವ್ ಬಂದಿದ್ದು ಕೊರೊನಾ ಸೋಂಕು ಅವರಿಗೆ ಬಾಧಿಸಿಲ್ಲ ಎಂಬುದು ತಿಳಿದುಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.